ಬುಧವಾರ, ಜೂನ್ 23, 2021
24 °C

ಚಂದಪದ್ಯ: ನನ್ನ ಮೊದಲ ಕಿಸೆ

ಮಾಲತಿ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

`ಏನೊ ಪುಟ್ಟಾ, ಏನೊ ಪುಟ್ಟಾ

ಏನದು ಏನದು ಸಪ್ಪಳಾ?~

`ಎಲ್ಲಿದೆ ಅಪ್ಪಾ ಸಪ್ಪಳ?~

`ನೋಡು, ಬಾಯಲ್ಲಡಗಿದ ಸಪ್ಪಳ~

ಇದು ಹಪ್ಪಳ, ಕಿಸೆಯಲ್ಲೇನೊ ಸಪ್ಪಳ!~

`ಅಪ್ಪಾ ನನಗೆ ಐದನೆ ವರ್ಷ,

ಮೊದಲನೆ ಕಿಸೆ. ಇದು ನನಗೆಂಥಾ ಹರ್ಷ!

ಆಸೆಯ ಹಕ್ಕಿಯ ಗೂಡಿದು

ಮರೆಯಲ್ಲಿಡುವ ಮಾಡಿದು!~

`ಕಿಸೆಯೆಂದರೆ ಇಷ್ಟು ಸಂಭ್ರಮವೇಕೆ?

ಏನೇನದ್ಭುತ ವಸ್ತುಗಳು?~

`ಗೆದ್ದು ತಂದ ಹೆಮ್ಮೆಯ ಗೋಲಿ

ಮರದಲ್ಲಿ ಕದ್ದ ಪೇರಲೆ, ನೆಲ್ಲಿ,

ಬಣ್ಣದ ಗರಿಗಳು ಕಿಸೆ ತುಂಬ

ಕನಸಿನ ಮರಿಗಿದೆ ಕಿಸೆ ಇಂಬು~

`ಭಲೆ ಭಲೆ ಪುಟ್ಟಾ ತಗೋ ರೂಪಾಯಿ

ತುಂಬಿಸು ಕನಸು ಬಾಲಸಿಪಾಯಿ,

ತುಂಬುವೆನೀಗ ಪೆಪ್ಪರಮೆಂಟು

ಬೆಳೆಯಲಿ ನಿನ್ನ ಕಿಸೆಯ ನಂಟು!~

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.