ಸೋಮವಾರ, ಅಕ್ಟೋಬರ್ 21, 2019
23 °C

ಚಂದಿರ

Published:
Updated:

ಚಂದಪದ್ಯ

ಚಂದಿರ ಬಂದನು

ಚಂದಿರ ಬಂದನು

ನೋಡು ಸುಂದರ ಬಾನಿಗೆ,

ಎಲ್ಲೆಡೆ ಬೆಳ್ಳಿಯ

ಬೆಳಕನು ತಂದನು

ಊರು, ಬೆಟ್ಟ, ಕಾನಿಗೆ.

ಹಿಂದೆಯೆ ಬಂದಿತು

ತಾರೆಯ ದಂಡು

ಬಾನಲಿ ಮುತ್ತು ಸುರಿದಂತೆ,

ಬೆಳುದಿಂಗಳು ತಾ

ಇಳಿಯಿತು ಧರೆಗೆ

ಬೆಳಕಿನ ಹೊಳೆಯೇ ಹರಿದಂತೆ!

ಮುಗಿಲಿನ ಸಂಭ್ರಮ

ಹೇಳಲು ತೀರದು

ಹರಿಸು ದೃಷ್ಟಿಯನು ಬಾನಿಗೆ,

ಸೇರಿಸು ಸರಿಗಮ

ದನಿಯನು ಜೊತೆಗೆ

ಇದುವೆ ದೇವನ ದೇಣಿಗೆ.

ಸಂಜೆಯವರೆವಿಗೆ

ದುಡಿದು ದಣಿದವಗೆ

ವಿಶ್ರಾಂತಿ, ಸುಖ ನೀಡುತ್ತ,

ಚೆಲು ಬೆಳುದಿಂಗಳು

ತಿಳಿ ತಂಗಾಳಿಯು

ರಮಿಸಿದೆ ತೋಪವ ತೀಡುತ್ತ.

Post Comments (+)