ಶನಿವಾರ, ನವೆಂಬರ್ 23, 2019
23 °C

ಚಂದ್ರಗ್ರಹಣ: ಇಂದು 17 ತಾಸು ತಿಮ್ಮಪ್ಪನ ದರ್ಶನ ಇಲ್ಲ

Published:
Updated:

ತಿರುಪತಿ (ಪಿಟಿಐ): ಚಂದ್ರಗ್ರಹಣ ಪ್ರಯುಕ್ತ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 10ಗಂಟೆಯ ತನಕ 17 ಗಂಟೆಗಳ ಕಾಲ ಭಕ್ತರಿಗೆ ತಿಮ್ಮಪ್ಪನ ದರ್ಶನ ರದ್ದುಪಡಿಸಲಾಗಿದೆ ಎಂದು ದೇವಸ್ಥಾನ ಮೂಲಗಳು  ಹೇಳಿವೆ.ಸೂರ್ಯಾಸ್ತಕ್ಕಿಂತ ಒಂದು ಗಂಟೆಯ ಮೊದಲೇ ದೇವಸ್ಥಾನವನ್ನು ಮುಚ್ಚಲಾಗುತ್ತಿದ್ದು, ಶುಕ್ರವಾರ ಬೆಳಿಗ್ಗೆ 10 ಗಂಟೆಯ ನಂತರವೇ ಭಕ್ತರ ದರ್ಶನಕ್ಕೆ ತೆರೆಯಲಾಗುವುದು.ಶುಕ್ರವಾರ ಬೆಳಗಿನ ಜಾವ 1.22 ರಿಂದ 1.55 ರ ಅವಧಿಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)