ಗುರುವಾರ , ಜುಲೈ 29, 2021
26 °C

ಚಂದ್ರಪಾಲ್ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್ಸಟನ್ (ಪಿಟಿಐ):  ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಂತರ ನಿವೃತ್ತಿಯಾಗುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಆಯ್ಕೆದಾರರು ಸೂಚಿಸಿದ್ದರು. ಅವರ ಮಾತನ್ನು ನಿರಾಕರಿಸಿದ್ದರಿಂದ ಪಾಕಿಸ್ತಾನ ವಿರುದ್ಧದ ಸರಣಿಗೆ ತಮ್ಮನ್ನು ಕೈಬಿಡಲಾಗಿದೆ ಎಂದು ಕ್ರಿಕೆಟ್ ಆಟಗಾರ ಶಿವನಾರಾಯಣ ಚಂದ್ರಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಡಳಿಯ ಮುಖ್ಯಸ್ಥ ಎಮೆಸ್ಟ್ ಹಿಲಿಯಾರೆಗೆ ಪತ್ರ ಬರೆದಿದ್ದಾರೆ. ಶಿಸ್ತಿನ ಕೊರತೆಯಿದೆ ಎಂದು ಹೇಳಿಕೆ ನೀಡಿರುವ ಕುರಿತು ವಿವರಣೆ ಕೋರಿದ್ದಾರೆ. 

‘ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಪ್ರವಾಸದ ನಂತರ ನನ್ನೊಂದಿಗಿನ ವರ್ತನೆ ಬದಲಾಗಿದೆ. ಪಂದ್ಯವೊಂದರಲ್ಲಿ ಚೆಂಡು ಹಿಡಿಯಲು ಡೈವ್ ಮಾಡಿದ ಸಂದರ್ಭದಲ್ಲಿ ಗಾಯವಾಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಂಡೀಸ್ ಕ್ರಿಕೆಟ್ ಮಂಡಳಿಯ ಫಿಸಿಯೋ ಯಶಸ್ವಿಯಾಗಿರಲಿಲ್ಲ. ತಂಡದ ಫಿಸಿಯೋ ಹೇಳಿದಂತೆ ವಿಶ್ರಾಂತಿ ಪಡೆಯಬೇಕಾಯಿತು. ಚಿಕಿತ್ಸೆಯ ವೆಚ್ಚವನ್ನು ಭರಿಸಿದ ನಂತರ ಮನೆಗೆ ಮರಳಿದ್ದೆ.

ಸದ್ಯ ನಡೆಯುತ್ತಿರುವ ಪಾಕ್ ವಿರುದ್ಧದ ಸರಣಿಗೆ ವಿಂಡೀಸ್ ತಂಡದಿಂದ ಚಂದ್ರಪಾಲ್ ಜೊತೆಗೆ ಕ್ರಿಸ್ ಗೇಲ್ ಮತ್ತು ರಾಮನರೇಶ್ ಸರವಣ್ ಅವರನ್ನೂ ಕೈಬಿಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.