ಮಂಗಳವಾರ, ಅಕ್ಟೋಬರ್ 15, 2019
28 °C

ಚಂದ್ರಬಾಬು ವಿರುದ್ಧ ಪ್ರತಿಭಟನೆ

Published:
Updated:

ಹೈದರಾಬಾದ್: ಟಿಡಿಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ಎಸೆದು, ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ವಾರಂಗಲ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆ ಈಡೇರಿಕೆ ತಡವಾಗುತ್ತಿರುವುದಕ್ಕೆ ಟಿಡಿಪಿಯೇ ಕಾರಣ ಎಂದು ಆರೋಪಿಸಿ ಟಿಆರ್‌ಎಸ್ ನೇತೃತ್ವದಲ್ಲಿ ತೆಲಂಗಾಣ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.

Post Comments (+)