ಚಂದ ಪದ್ಯ

7

ಚಂದ ಪದ್ಯ

Published:
Updated:

ಕಾರಿಗೆಷ್ಟು ಸೊಕ್ಕು?

ರಸ್ತೆ ದಾಟಲು ಓಡ್ತಾ ಬಂತು

ಕಪ್ಪು ಕೆರೆ ಹಾವು

ಅದರ ಬಾಲ ಅರೆದೇ ಬಿಡ್ತು

ದೊಡ್ಡದೊಂದು ಕಾರು

ರಸ್ತೆ ದಾಟಲು ಹಾವು ಬಂದ್ರೆ

ಅದರದ್ದೇನು ತಪ್ಪು....?

ಅದಕೂ ದಾರಿ ಬಿಡಬಾರ‌್ದಿತ್ತಾ

ಕಾರಿಗೆಷ್ಟು ಸೊಕ್ಕು?

 

ಹಿಕ್ಕೆ ನೋಡಿ

ಪಾರಿವಾಳದ ಹಿಕ್ಕೆ ನೋಡಿ

ಥೇಟ್ ಬಿಳೆ ಬಣ್ಣ

ಪಾರಿವಾಳ ತಿಂದಿರಬಹುದು

ಅಜ್ಜನ ಕವಳದ ಸುಣ್ಣ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry