ಚಂದ ಪದ್ಯ

7

ಚಂದ ಪದ್ಯ

Published:
Updated:

ನಮ್ಮ ಮನೆಯ ಹಸು

ಕೋಡು ಡೊಂಕು ತುಸು

ಅದರ ಹಾಲು ಮಧುರ

ಕೊಡುವುದೆಮಗೆ ಕಸುವು.

ನಮ್ಮರೈತ ಕುಲದ

ಜೀವನಾಡಿ `ಸಖ~

ಎತ್ತು ದನ ಕಟ್ಟಲು

ಇರುವುದೆಂಥ ಸುಖ!

ಸಗಣಿ ಮೂತ್ರ ಗಂಜಲು

ಕೊಡುವುದೊಳ್ಳೆ ಫಸಲು.

ಗ್ಯಾಸು ದೀಪ ಉರುವಲು

ಎಲ್ಲ ಲಭ್ಯ ಇದರಲು.

ಹಂಡ ಬಂಡ ಕೆಂಪು

ವಿವಿಧ ಜಾತಿ ತಳಿ,

ಬೇರೆ ಬೇರೆ ಬಣ್ಣ

ಹಾಲು ಒಂದೆ ಬಿಳಿ.

ಮನೆಯ ಪಕ್ಕ ಕೊಟ್ಟಿಗೆ

ಹೋಗಿ ಅಮ್ಮನೊಟ್ಟಿಗೆ

ಕೊಡುವೆ ಪುಟ್ಟ ಕರುವಿಗೆ

ರೊಟ್ಟಿಯಿಟ್ಟು ತಟ್ಟೆಗೆ

ಪರೋಪಕಾರಿ ಆಕಳು

ಇರಲಿ ತುಂಬ ನಾಡೊಳು.

ಹಾಲು ತುಪ್ಪ ಬೆಣ್ಣೆ

ಉಣ್ಣುತಿರಲಿ ಮಕ್ಕಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry