ಚಕ್ಕರ್ ಹಾಕುವ ಉಪನ್ಯಾಸಕರು!

7

ಚಕ್ಕರ್ ಹಾಕುವ ಉಪನ್ಯಾಸಕರು!

Published:
Updated:

ಕಾಲೇಜು ಹಾಗೂ ಮೈಸೂರು ವಿ.ವಿ. ವಿಭಾಗ­ಗಳಲ್ಲಿ ಚಕ್ಕರ್ ಹಾಕುವ ಮತ್ತು ತರಗತಿ­ಗಳಲ್ಲಿ ಸರಿ­ಯಾಗಿ ಬೋಧನೆ ಮಾಡದ ಉಪ­ನ್ಯಾ­ಸಕರ ಮೇಲೆ ನಿಗಾ ಇಟ್ಟು ನಿಯಂತ್ರಿ­ಸಲು, ಪದವಿ ಕಾಲೇಜು­ಗಳಿಗೆ ಆನ್‌ಲೈನ್‌ ವ್ಯವಸ್ಥೆ ಹಾಗೂ ವಿ.ವಿ. ವಿಭಾಗಗಳಲ್ಲಿ ಬಯೋಮೆಟ್ರಿಕ್ ಮತ್ತು ಸಿ.ಸಿ. ಕ್ಯಾಮೆರಾ ಅಳವಡಿಸಲು ಉನ್ನತ ಶಿಕ್ಷಣ ಸಚಿ­ವ ಆರ್‌.ವಿ.ದೇಶಪಾಂಡೆ ಹಾಗೂ ಕುಲಪತಿ ಕೆ.ಎಸ್. ರಂಗಪ್ಪ ಮುಂದಾಗಿರುವುದು ಒಳ್ಳೆಯ ಬೆಳ­ವಣಿಗೆ. ಇದರಿಂದ, ಉಪ­­ನ್ಯಾ­ಸ­ಕ­ರ ಹದ್ದುಮೀರಿದ ವರ್ತನೆಗೆ ಕಡಿವಾಣ ಬೀಳಲಿದೆ.ಸಮಯ ಮತ್ತು ಕರ್ತವ್ಯಪ್ರಜ್ಞೆ ಬೆಳೆಸಿಕೊಂಡು ಶಿಸ್ತು, ಪ್ರಾಮಾಣಿಕತೆ, ನಿಷ್ಠೆ ಮುಂತಾದ ಮೌಲ್ಯ­ಗಳ ಬಗ್ಗೆ ಮನವರಿಕೆ ಮಾಡಿ ನೀತಿ ಪಾಠ ಹೇಳ­ಬೇಕಾದವರೇ ಎಲ್ಲಾ ತತ್ವಗಳನ್ನು ಗಾಳಿಗೆ ತೂರಿ, ಕರ್ತವ್ಯಕ್ಕೆ ಚ್ಯುತಿ ತಂದು  ವಿದ್ಯಾರ್ಥಿಗಳ ಭವಿ­ಷ್ಯಕ್ಕೆ ಮಾರಕವಾಗುತ್ತಿರುವುದು ವಿಷಾದ­ನೀಯ. ತಪ್ಪೆಸಗುವ ವಿದ್ಯಾರ್ಥಿಗಳನ್ನು ಸನ್ಮಾ­ರ್ಗಕ್ಕೆ ತಂದು ಶಿಸ್ತಿನ ಪಾಠ ಹೇಳಬೇಕಾದ ಉಪ­ನ್ಯಾಸಕರುಗಳಿಗೆ ಶಿಸ್ತಿನ ಹಾಗೂ ನೀತಿಪಾಠ ಹೇಳಿ ಅವರ ಮೇಲೆ ನಿಗಾ ಇಟ್ಟು ನಿಯಂತ್ರಿಸಬೇಕಾದ ವಾತಾ­ವರಣ ಸೃಷ್ಟಿಯಾಗು­ತ್ತಿರುವುದು ಸಮಾಜದ ದುರಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry