ಸೋಮವಾರ, ಮಾರ್ಚ್ 8, 2021
24 °C

ಚನ್ನಕೇಶವ ದೇಗುಲಕ್ಕೆ ಭಾರದ್ವಾಜ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಕೇಶವ ದೇಗುಲಕ್ಕೆ ಭಾರದ್ವಾಜ್ ಭೇಟಿ

ಬೇಲೂರು: ರಾಜ್ಯಪಾಲರಾದ ನಂತರ ಎಚ್‌.ಆರ್‌. ಭಾರದ್ವಾಜ್‌ ಇಲ್ಲಿನ ಚನ್ನಕೇಶವ ದೇವಾಲಯಕ್ಕೆ ಮಂಗಳವಾರ 3ನೇ ಬಾರಿ ಭೇಟಿ ನೀಡಿ ಚನ್ನಕೇಶವನಿಗೆ ಪೂಜೆ ಸಲ್ಲಿಸಿದರು.ಪತ್ನಿ ಸಮೇತರಾಗಿ ದೇಗುಲಕ್ಕೆ ಭೇಟಿ ನೀಡಿದ ರಾಜ್ಯಪಾಲರಿಗೆ ದೇವಾಲಯದ ಸಂಪ್ರದಾಯದಂತೆ ಮಂಗಳವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ನಂತರ ಚನ್ನಕೇಶವನ ಸನ್ನಿಧಿಗೆ ತೆರಳಿದ ರಾಜ್ಯಪಾಲರು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕ ಶ್ರೀನಿವಾಸ್‌ ಭಟ್ಟರ್‌ ರಾಜ್ಯಪಾಲರಿಗೆ ಶಾಲು ಹೊದಿಸಿ ಗೌರವಿಸಿದರು. ಅಲ್ಲಿಂದ ಸೌಮ್ಯನಾಯಕಿ ಅಮ್ಮನವರ ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಿದರು.ನಂತರ ಅವರು ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಮತ್ತು ಶಂಕರಾಚಾರ್ಯರ ಕುರಿತು ಮಾತನಾಡಿದರು. ಬೇಲೂರು ಚನ್ನಕೇಶವನ ಸನ್ನಿಧಿ ಇಷ್ಟವೆನಿಸಿದ ಜಾಗವಾಗಿದೆ. ಹೀಗಾಗಿ ಈ ದೇವಾಲಯಕ್ಕೆ ಐದು ವರ್ಷಗಳಲ್ಲಿ ಮೂರು ಬಾರಿ ಭೇಟಿ ನೀಡಿದ್ದಾಗಿ ತಿಳಿಸಿದರು.ನಂತರ ದೇವಾಲಯದ ಮಾರ್ಗದರ್ಶಿ ಪುಸ್ತಕ ಮಳಿಗೆಗೆ ಭೇಟಿ ನೀಡಿದ ರಾಜ್ಯಪಾಲರು ಅಲ್ಲಿದ್ದ ‘ಚಾಣಕ್ಯ ನೀತಿ’ ಇಂಗ್ಲಿಷ್‌ ಆವೃತ್ತಿಯ ಪುಸ್ತಕ ಖರೀದಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಮಧುಕೇಶ್ವರ್‌, ತಹಶೀಲ್ದಾರ್‌ ಬಿ.ಎ. ಜಗದೀಶ್‌, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಮಣ ಗುರುಪ್ರಸಾದ್‌, ಸಿಪಿಐ ಕೆ.ಎಲ್‌. ಗಣೇಶ್‌ ಇತರೆ ಅಧಿಕಾರಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.