ಚನ್ನಗಿರಿ: ` 3.75 ಕೋಟಿ ಅನುದಾನಕ್ಕೆ ಮನವಿ

7

ಚನ್ನಗಿರಿ: ` 3.75 ಕೋಟಿ ಅನುದಾನಕ್ಕೆ ಮನವಿ

Published:
Updated:

ಚನ್ನಗಿರಿ: ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಇದಕ್ಕಾಗಿ ` 3.75 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ವಡ್ನಾಳ್‌ ರಾಜಣ್ಣ ಹೇಳಿದರು.ಪಟ್ಟಣದ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್‌ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ಇರುವುದು ಅಗತ್ಯ. ಸಮಯವನ್ನು ಸಂಪಾದನೆ ಮಾಡಲು ಸಾಧ್ಯ ಇಲ್ಲ. ಚಂಚಲತೆ ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಇರಬಾರದು. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಂಡು ಗುರಿಯನ್ನು ಹೊಂದಿ ಜೀವನದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣ ಪಡೆಯುವ ಕಡೆಗೆ ಗಮನಹರಿಸಬೇಕು ಎಂದರು.ಹಿರಿಯ ಸಮಾಜಸೇವಾ ಕಾರ್ಯಕರ್ತ ಡಾ.ಎ. ಬಸವಣ್ಣಯ್ಯ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧಮ್ಮ, ಶಕುಂತಲಮ್ಮ, ನಾಗೇಂದ್ರನಾಯ್ಕ, ಡಿ. ಶಿವಕುಮಾರ್‌, ಎನ್‌. ರವಿ, ರಾಜೇಶ್ವರಿ, ಶಿವಾಜಿರಾವ್‌, ಸೋಮಶೇಖರಯ್ಯ ಉಪಸ್ಥಿತರಿದ್ದರು. ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ವಿ. ವಸಂತಕುಮಾರ್‌ ಉಪನ್ಯಾಸ ನೀಡಿದರು.ಪ್ರೊ.ಕೆ.ಟಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಜಮೀರ್‌ ಅಹಮದ್‌ ಪ್ರಾರ್ಥಿಸಿದರು. ಕೆ.ವಿ. ವಿಜಯಕುಮಾರ್‌ ಸ್ವಾಗತಿಸಿದರು. ರಾಕೇಶ್‌ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry