ಚನ್ನಮ್ಮಗೆ ಸಿಗದ ಮಾನ್ಯತೆ- ವಿಷಾದ

7

ಚನ್ನಮ್ಮಗೆ ಸಿಗದ ಮಾನ್ಯತೆ- ವಿಷಾದ

Published:
Updated:

ಚನ್ನಮ್ಮನ ಕಿತ್ತೂರು (ಬೆಳಗಾವಿ): ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ವೀರರಾಣಿ ಕಿತ್ತೂರು ಚನ್ನಮ್ಮಳಿಗೆ ರಾಷ್ಟ್ರಮಟ್ಟದಲ್ಲಿ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎಂದು ಇತಿಹಾಸ ತಜ್ಞೆ ಡಾ.ಸ್ಮಿತಾ ಸುರೇಬಾನಕರ ವಿಷಾದಿಸಿದರು. ಚನ್ನಮ್ಮನ ಕಿತ್ತೂರು ಉತ್ಸವದ ಎರಡನೆಯ ದಿನವಾದ ಸೋಮವಾರ ನಡೆದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.~ಚನ್ನಮ್ಮ ಕರ್ನಾಟಕದಲ್ಲಿ ಅಲ್ಲದೇ ಬೇರೆ ಕಡೆ ಹುಟ್ಟಿದ್ದರೆ ರಾಷ್ಟ್ರದ ಕಣ್ಮಣಿಯಾಗಿರುತ್ತಿದ್ದಳು. ಈಗಲಾದರೂ ಇತಿಹಾಸದ ಪುಟದಲ್ಲಿ ಚನ್ನಮ್ಮಳ ಸಾಧನೆಯನ್ನು ಸಮಗ್ರವಾಗಿ ದಾಖಲಿಸುವ ಮೂಲಕ ಅವಳ ಶೌರ್ಯವನ್ನು ರಾಷ್ಟ್ರಕ್ಕೆ ತಿಳಿಸುವ ಕೆಲಸ ಆಗಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.~ಕಿತ್ತೂರು ಸಂಸ್ಥಾನದ ಸಮಗ್ರ ದಾಖಲೆಗಳು ಒಂದೆಡೆ ಸಿಗುವಂತೆ ಪ್ರಾಚ್ಯವಸ್ತು ಇಲಾಖೆ ವ್ಯವಸ್ಥೆ ಮಾಡಬೇಕು. ಕಿತ್ತೂರಿನ ಇತಿಹಾಸದ ಬಗೆಗೆ ಇನ್ನೂ ಹೆಚ್ಚಿನ ಸಂಶೋಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕಿತ್ತೂರು ಇತಿಹಾಸ ಸಂಶೋಧನಾ ಮಂಡಳಿ ರಚಿಸಬೇಕು~ ಎಂದು ಅವರು ಆಗ್ರಹಿಸಿದರು.~ಕಿತ್ತೂರನ್ನು ಪಾರಂಪರಿಕ ನಗರ ಮಾಡುವ ನಿಟ್ಟಿನಲ್ಲಿ ಯೋಚಿಸಬೇಕು. ಕಿತ್ತೂರಿಗೆ ಸಂಬಂಧಿಸಿದ ಸಂಶೋಧನಾ ಕೃತಿಗಳನ್ನು ಪ್ರಕಟಿಸುವ ಕೆಲಸ ಆಗಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry