ಭಾನುವಾರ, ಜನವರಿ 26, 2020
22 °C

ಚನ್ನಮ್ಮ ಸೈನಿಕ ಶಾಲೆ 29ರಂದು ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ `ಕಿತ್ತೂರು ರಾಣಿ ಚನ್ನಮ್ಮ ವಸತಿಯುತ ಬಾಲಕಿಯರ ಸೈನಿಕ ಶಾಲೆ~ಯ ಆರನೇ ತರಗತಿಗೆ ಪ್ರವೇಶ ಪರೀಕ್ಷೆ ಇದೇ 29ರಂದು ನಡೆಯಲಿದೆ.ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೇ ಅಂಚೆ ಮೂಲಕ ಕಳುಹಿಸಲಾಗಿದೆ. ಅರ್ಜಿಯಲ್ಲಿ ನಮೂದಿಸಿದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರಗಳನ್ನು ತೆಗೆದುಕೊಂಡು 29ರಂದು ಬೆಳಿಗ್ಗೆ 9 ಗಂಟೆಯ ಒಳಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಮಾಹಿತಿಗೆ 08288-234601 ಅಥವಾ 234608ಗೆ ಕರೆ ಮಾಡಬಹುದು.

ದೈಹಿಕ ಶಿಕ್ಷಕರಿಗೆ ರಾಜ್ಯಮಟ್ಟದ ತರಬೇತಿ

ಹೊಳಲ್ಕೆರೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಡಿಎಸ್‌ಇಆರ್‌ಟಿ ಮತ್ತು ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿಗಳ ಆಶ್ರಯದಲ್ಲಿ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಜ. 19 ರಿಂದ ಹಿರಿಯ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಕರಿಗಾಗಿ ರಾಜ್ಯಮಟ್ಟದ ಎಂಆರ್‌ಪಿ (ಮಾಸ್ಟರ್ ರಿಸೋರ್ಸ್‌ ಪರ‌್ಸನಾಲಿಟಿ) ತರಬೇತಿ ನಡೆಯಲಿದೆ.ಬೆಂಗಳೂರು, ಮೈಸೂರು, ಗುಲ್ಬರ್ಗಾ ಮತ್ತು ಬೆಳಗಾವಿ ವಿಭಾಗಗಳಿಂದ 70 ದೈಹಿಕ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಅಥ್ಲೆಟಿಕ್ಸ್, ಪರೇಡ್, ಏರೋಬಿಕ್ಸ್, ಯೋಗ ಮತ್ತಿತರ ವಿಷಯಗಳ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆಗಳು ನಡೆಯಲಿವೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)