ಚನ್ನರಾಯಪಟ್ಟಣ: ಅಪಘಾತ–ಗಂಗೊಳ್ಳಿಯ ನಾಲ್ವರ ಸಾವು

7

ಚನ್ನರಾಯಪಟ್ಟಣ: ಅಪಘಾತ–ಗಂಗೊಳ್ಳಿಯ ನಾಲ್ವರ ಸಾವು

Published:
Updated:

ಕುಂದಾಪುರ: ಹಾಸನ ಜಿಲ್ಲೆಯ ಚನ್ನ­ರಾಯಪಟ್ಟಣದ  ಹೊರವಲ­ಯದ ಗುಳಗೊಂಡ ಕ್ರಾಸ್‌ ಬಳಿ ಬುಧವಾರ  ಸಂಭವಿಸಿದ ಭೀಕರ ರಸ್ತೆ ಅಪಘಾತ­ದಲ್ಲಿ ದುರ್ಮರಣಕ್ಕೆ ಒಳಗಾದ 7 ಮಂದಿಯಲ್ಲಿ ನಾಲ್ಕು ಮಂದಿ ಕುಂದಾ­ಪುರ ಸಮೀಪದ ಗಂಗೊಳ್ಳಿಯವರು ಎಂದು ಗುರುತಿಸಲಾಗಿದೆ.ಚತುಷ್ಪಥ ಕಾಮಗಾರಿ ನಡೆಯು­ತ್ತಿದ್ದ ಕಾರಣದಿಂದ ರಸ್ತೆಯಲ್ಲಿ­ನಿಯಂತ್ರಣ ತಪ್ಪಿದ್ದ ಟಿಪ್ಪರ್‌, ಇಂಡಿಕಾ ಹಾಗೂ ಹೊಂಡಾಸಿಟಿ ಕಾರುಗಳ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ಅಪಘಾತ ಉಂಟಾಗಿದೆ. ಅಪಘಾತ ತೀವ್ರತೆಗೆ ಇಂಡಿಕಾ, ಹೊಂಡಾಸಿಟಿ ಕಾರಿನಲ್ಲಿ ಇದ್ದ ಪ್ರಯಾಣಿಕರು ಪೈಕಿ ತಲಾ ಮೂರು ಮಂದಿ ಸ್ಥಳದಲ್ಲೇ ಮೃತ­ರಾಗಿದ್ದಾರೆ. ಗಾಯಗೊಂಡ­ವ­ರನ್ನು ಹಾಸನದ ಜಿಲ್ಲಾಸ್ಪತ್ರೆಗೆ ಸೇರಿಸ­ಲಾಗಿತ್ತು. ಈ ಪೈಕಿ ಗಂಭೀರವಾಗಿ ಗಾಯ­ಗೊಂಡಿದ್ದ ಇನ್ನೊಬ್ಬರು ಮೃತಪ­ಟ್ಟಿದ್ದಾರೆ.ಹೊಂಡಾಸಿಟಿ ಕಾರಿನಲ್ಲಿ ಗಂಗೊಳ್ಳಿ ಮೂಲದ ಲೂವಿಸ್‌ ಪ್ರದೀಪ್ ಫೆರ್ನಾಂಡಿಸ್‌ (30), ಅವರ ಪತ್ನಿ ಪ್ರೀಯಾ (26), ಪುತ್ರ ಜೋತ್ಸ್ನಾ (4), ಮೈದಿನಿ ಫಿಲೋಮಿನಾ (24), ಸಹೋದರ ಸಂಬಂಧಿ ಸೋನಿಯಾ ಪಿಂಟೊ (26) ಕಾರು ಚಲಾಯಿಸು­ತ್ತಿದ್ದ ವಿಜಯ್‌(30) ಪ್ರಯಾಣಿಸು­ತ್ತಿದ್ದರು. ಈ ಪೈಕಿ ಪ್ರದೀಪ್ ಫರ್ನಾಂ­ಡಿಸ್, ಅವರ ಮಗು ಜೋತ್ಸ್ನಾ ಹಾಗೂ ಸೋನಿಯಾ ಸ್ಥಳದ­ಲ್ಲಿಯೇ ಮೃತ­ರಾದರೆ, ನಾದಿನಿ ಫಿಲೋ­ಮಿನಾ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆ­ಯಲ್ಲಿ ಕೊನೆ­ಯುಸಿರು ಬಿಟ್ಟಿದ್ದಾರೆ. ಅಪಘಾತದಲ್ಲಿ ಗಾಯಾಳುಗಳಾ­ಗಿ­ರುವ ಪ್ರಿಯಾ ಹಾಗೂ ವಿಜಯ್‌ ಆಸ್ಪ­ತ್ರೆ­ಯಲ್ಲಿ ಚಿಕಿತ್ಸೆ ಪಡೆದುಕೊಳ್ಳು­ತ್ತಿದ್ದಾರೆ.ಗಂಗೊಳ್ಳಿಯ ಚರ್ಚ್‌ ರಸ್ತೆಯ ನಿವಾಸಿಯಾದ ಕ್ಷಿಫರ್ಡ್‌ ಹಾಗೂ ಜೀನಿವಿವ್‌ ದಂಪತಿ ಪುತ್ರರಾಗಿದ್ದ ಪ್ರದೀಪ್‌ ಬೆಂಗಳೂರಿನಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆಗಿ ಉದ್ಯೋಗದ­ಲ್ಲಿದ್ದರು. ಫಿಲೋಮಿನಾ ಗಂಗೊಳ್ಳಿಯ ಸೋಲೋಮನ್‌ ಲೋಬೋ ಹಾಗೂ ಐರಿನ್‌ ಲೋಬೋ ದಂಪತಿ ಪುತ್ರಿ. ಎಂಸಿಎ ಪದವೀಧರೆಯಾಗಿದ್ದ ಈಕೆ ಬೆಂಗಳೂರಿನ ವಿಪ್ರೋ ಸಂಸ್ಥೆಯಲ್ಲಿ ಉದ್ಯೋ­ಗಿಯಾಗಿದ್ದರು. ಉಪನ್ಯಾಸಕಿ­ಯಾಗಿದ್ದಸೋನಿಯಾ ಮೂಲತ: ಕುಂದಾ­ಪುರ ತಾಲ್ಲೂಕಿನವ­ರಾಗಿದ್ದು, ಸದ್ಯ ಬೆಂಗಳೂರಿನಲ್ಲಿರುವ ವಾಲ್ಟರ್‌ ಪಿಂಟೋ, ಹೆಲನ್ ದಂಪತಿ ಪುತ್ರಿ.

ಕ್ರಿಸ್ಮಸ್‌ ಆಚರಣೆಗೆ ಬೆಂಗಳೂರಿ­ನಿಂದ ಹುಟ್ಟೂರಿಗೆ ಬಂದಿದ್ದ ಅವರು ಮಂಗಳವಾರ ಮಧ್ಯರಾತ್ರಿಯ ಹೊಸ ವರ್ಷದ ಪೂಜೆ, ಸಂಭ್ರಮಾ­ಚರಣೆ­ಬಳಿಕ ಬುಧ­ವಾರ ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣಿ­ಸಿ­ದ್ದರು. ಶವಗಳನ್ನು ಗುರು­ವಾರ ಉ­ಡು­­ಪಿಗೆ ತರಲಾಗಿದ್ದು, ಶುಕ್ರ­ವಾರ ಗಂಗೊ­ಳ್ಳಿಯಲ್ಲಿ ಅಂತ್ಯವಿಧಿಗ­ಳನ್ನು ನಡೆಸ­­ಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry