ಚಪ್ಪಲಿ ಎಸೆತ: ಕ್ರಮದ ಅಗತ್ಯವಿಲ್ಲ- ಅರವಿಂದ ಕೇಜ್ರಿವಾಲ್

7

ಚಪ್ಪಲಿ ಎಸೆತ: ಕ್ರಮದ ಅಗತ್ಯವಿಲ್ಲ- ಅರವಿಂದ ಕೇಜ್ರಿವಾಲ್

Published:
Updated:

ಅಯೋಧ್ಯೆ (ಐಎಎನ್‌ಎಸ್): ಲಖನೌದಲ್ಲಿ ಮಂಗಳವಾರ ತಮ್ಮ ಮೇಲೆ ಚಪ್ಪಲಿ ಎಸೆದ ಯುವಕನನ್ನು ಬಿಡುಗಡೆ ಮಾಡುವಂತೆ ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಪೊಲೀಸರನ್ನು ಒತ್ತಾಯಿಸಿದ್ದಾರೆ.ಆ ವ್ಯಕ್ತಿಯ ಬಗ್ಗೆ ನನಗೆ ಕೆಟ್ಟ ಅಭಿಪ್ರಾಯಗಳಿಲ್ಲ. ಈ ಕೆಲಸ ಮಾಡುವ ಮುಂಚೆ ಆತನ ಮನಸ್ಸಿನಲ್ಲಿ ಏನಿತ್ತೊ ನನಗೆ ಗೊತ್ತಿಲ್ಲ. ಆದರೆ ಯಾವುದಕ್ಕೂ ಹಿಂಸಾಚಾರವೇ ಮಾರ್ಗವಲ್ಲ; ಕುಳಿತು ಮಾತುಕತೆ ನಡೆಸಬೇಕು.    

ಅವನು ಎಲ್ಲಿದ್ದಾನೋ ನನಗೆ ಗೊತ್ತಿಲ್ಲ. ಪೋಲಿಸ್ ವಶದಲ್ಲಿದ್ದರೆ ಅವನನ್ನು ಬಿಟ್ಟು ಬಿಡಿ  ಮತ್ತು ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಹೇಳುತ್ತೇನೆ~ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry