ಚರಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕ ಸಾವು

7

ಚರಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕ ಸಾವು

Published:
Updated:

ಧಾರವಾಡ: ರಸ್ತೆ ಕೆಳಗೆ ಚರಂಡಿಯೊಳಗೆ ಇಳಿದು  ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ  ಇಲ್ಲಿನ ಟೋಲ್‌ನಾಕಾ ಸಮೀಪ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಇವರನ್ನು ಯಾಕೂಬ್ ದೇವಪ್ಪ ಯಲಕ್‌ಪಾಟಿ (55) ಎಂದು ಗುರುತಿಸಲಾಗಿದೆ. ಅವರಿಗೆ ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.ಬೆಳಿಗ್ಗೆ ಯಾಕೂಬ್ ಹಾಗೂ ನಲ್ಲಪ್ಪ ಎಂಬುವವರು ಚರಂಡಿಯೊಳಗೆ ಇಳಿದು ಸ್ವಚ್ಛತಾ ಕೆಲಸಕ್ಕೆ ಮುಂದಾಗಿದ್ದರು. ಕೇವಲ ಮೂರು ಅಡಿ ಆಳದ ಚರಂಡಿಯೊಳಗೆ ಹೋದ ಯಾಕೂಬ್ ಕಸ ತೆಗೆಯುವಷ್ಟರಲ್ಲಿಯೇ ಒಮ್ಮೆಲೇ ನೀರು ಹರಿಯಿತು. ನೀರು ಡಿಢೀರ್ ನುಗ್ಗಿದ್ದರಿಂದ ಅವರಿಗೆ ಉಸಿರುಗಟ್ಟಿರಬಹುದು ಎಂದು ಭಾವಿಸಲಾಗಿದೆ. ನಲ್ಲಪ್ಪ ಪಾರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry