ಚರಂಡಿಯಲ್ಲಿ ಕರೆನ್ಸಿ ನೋಟುಗಳು!

7

ಚರಂಡಿಯಲ್ಲಿ ಕರೆನ್ಸಿ ನೋಟುಗಳು!

Published:
Updated:
ಚರಂಡಿಯಲ್ಲಿ ಕರೆನ್ಸಿ ನೋಟುಗಳು!

ಕೊಪ್ಪಳ: ನಗರದ ಗದಗ ರಸ್ತೆಯಲ್ಲಿರುವ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಟ್ಟಡ ಬಳಿಯ ಚರಂಡಿಯಲ್ಲಿ ರೂ 500, ರೂ 100 ಸೇರಿದಂತೆ ವಿವಿಧ ಮೌಲ್ಯದ ನೋಟುಗಳು ಸಿಕ್ಕ ಅಚ್ಚರಿಯ ಘಟನೆ ನಡೆಯಿತು. ಚರಂಡಿಯಲ್ಲಿದ್ದ ನೋಟುಗಳನ್ನು ಮಕ್ಕಳು ಹೆಕ್ಕಿ ತೆಗೆದು ಸಂಗ್ರಹಿಸಿ ಇಟ್ಟುಕೊಳ್ಳುವುದು ಕಾಣಿಸಿತು. ಈ ಸುದ್ದಿ ಹಬ್ಬುತ್ತಿದ್ದಂತೆಯೇ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಹಾಗೂ ವಯಸ್ಕರು ಸ್ಥಳಕ್ಕೆ ಧಾವಿಸಿದರು.ಈ ರೀತಿ ನೋಟುಗಳು ಸಿಗುತ್ತಿರುವುದು ಅನೇಕ ವದಂತಿ ಹಬ್ಬಲು ಕಾರಣವಾಯಿತು. ಈಗಾಗಲೇ ರೂ 10ರಿಂದ ರೂ 15 ಸಾವಿರ ಸಿಕ್ಕಿದೆ ಎಂಬ ಮಾತುಗಳನ್ನು ಹೇಳುವವರು ಕೆಲವರಾದರೆ, ಸಂಜೆ ಹೊತ್ತಿಗೆ ಈ ಮೊತ್ತ ರೂ 2 ಲಕ್ಷ ಗಡಿ ದಾಟಿತ್ತು.ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೆಲವು ನೋಟುಗಳನ್ನು ವಶಪಡಿಸಿಕೊಂಡರು.

ಆದರೆ, ಈ ನೋಟುಗಳು ಚರಂಡಿಯಲ್ಲಿ ಹೇಗೆ ಬಂದವು ಎಂಬುದು ಮಾತ್ರ ಗೊತ್ತಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry