ಮಂಗಳವಾರ, ಮೇ 18, 2021
29 °C

ಚರಂಡಿ ಒತ್ತುವರಿ ಕಟ್ಟಡ ತೆರವು: ಶಾಸಕ ಬಾಗವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ನಗರದಲ್ಲಿ ಚರಂಡಿಗಳ ಮೇಲೆ ಸಾರ್ವಜನಿಕರು ನಿರ್ಮಿಸಿರುವ ಕಟ್ಟಡಗಳ ಭಾಗವನ್ನು ತೆರವುಗೊಳಿಸಲಾಗುವುದು ಎಂದು ಶಾಸಕ ಡಾ.ಎಂ.ಎಂ. ಬಾಗವಾನ ಹೇಳಿದರು.



ಇಲ್ಲಿಯ ವಾರ್ಡ್ ನಂ.25ರಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ರೂ.10 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.



ಚರಂಡಿ ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆಯ ನೀರು ಸರಾಗವಾಗಿ ಹರಿದು ಹೋಗದೇ ಮನೆಗಳಿಗೆ ನುಗ್ಗುತ್ತಿದೆ. ಇದನ್ನು ತಪ್ಪಿಸಲು ಸಾರ್ವಜನಿಕರೂ ಸಹಕಾರ ನೀಡಬೇಕು. ತಾವು ಮಾಡಿಕೊಂಡಿರುವ ಚರಂಡಿಗಳ ಒತ್ತುವರಿಯನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.



2012-13ನೇ ಸಾಲಿನ ಎಸ್‌ಎಫ್‌ಸಿ ಅನುದಾನದ ಎಲ್ಲ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲು ಸೂಚಿಸಲಾಗಿದೆ. ನಗರದ ಎಲ್ಲ ಬಡಾವಣೆಗಳ ರಸ್ತೆಗಳನ್ನು ಹಂತ ಹಂತವಾಗಿ ರಿಪೇರಿ ಮಾಡಲಾಗುವುದು. ದಿನದ 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆ, ನಗರದ ಸ್ವಚ್ಛತೆ ಹಾಗೂ ಒಳಚರಂಡಿ ಸ್ವಚ್ಛಗೊಳಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.



ನಗರಸಭೆ ಪ್ರಭಾರ ಆಯುಕ್ತ ಎಸ್.ಎಸ್. ಹೇರಲಗಿ, ಎಸ್.ಎಫ್.ಸಿ. ಯೋಜನೆಯಡಿಯಲ್ಲಿ ನಗರದ ಎಲ್ಲ ಬಡಾವಣೆಗಳಲ್ಲಿಯ ರಸ್ತೆ ಮತ್ತು ಚರಂಡಿ ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಿದರು.

ನಗರಸಭೆ ಸದಸ್ಯರಾದ ರೌವೂಫ್ ಶೇಖ, ಹಾಫಿಜಾ ಹುಸೇನ್ ಸಿದ್ದಕಿ, ಇಲಿಯಾಸ ಸಿದ್ದಕಿ ಇತರರು ಉಪಸ್ಥಿತರಿದ್ದರು. ಚ್.ಎ. ಮಾಶಾಳಕರ ಸ್ವಾಗತಿಸಿದರು.



ಪರಿಸರ ನಾಶದಿಂದ ಆಹಾರ: ಪರಿಸರ ನಾಶದಿಂದ ಮುಂಬರುವ ದಿನಗಳಲ್ಲಿ ಆಹಾರ, ಪರಿಶುದ್ಧ ಗಾಳಿ ಹಾಗೂ ಅಂತರ್ಜಲದ ಕೊರತೆ ಉಂಟಾಗಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎ. ತಾರಾಪ್ರಶಾಂತ ಹೇಳಿದರು.



ಇಲ್ಲಿಯ ರುಕ್ಮಾಂಗದ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಮತ್ತು ಚಾಣಕ್ಯ ಇತಿಹಾಸ ಸಂಘದಿಂದ ಪಾಲಕರಿಗೆ ಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.



ಶಾಲೆಯ ಆಡಳಿತಾಧಿಕಾರಿ ಎಂ.ಎಸ್. ದೇಶಪಾಡೆ ಮಾತನಾಡಿ, ಅರಣ್ಯಗಳು ಬರಿದಾಗುತ್ತಿದ್ದು, ಸಸಿ ನೆಡುವುವಿಕೆ ಅಗತ್ಯವಾಗಿದೆ. ಪರಿಸರ ನಾಶದಿಂದ ಮಳೆಯು ಸಹ ಕಡಿಮೆಯಾಗುತ್ತಿದೆ ಎಂದರು.



ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಜಿ. ಸಂಗಮ, ಇಂಥಹ ವಿನೂತನ ಕಾರ್ಯಕ್ರಮಗಳು ಪರಿಸರ ಜಾಗೃತಿ ಉಂಟು ಮಾಡಲು ಕಾರಣವಾಗುತ್ತಿದೆ ಎಂದು ಹೇಳಿದರು.

ಶಿಕ್ಷಕ ಎಸ್.ಯು. ಚವ್ಹಾಣ, ಎಲ್.ಕೆ. ಕುಲಕರ್ಣಿ ವೇದಿಕೆಯಲ್ಲಿದ್ದರು. ಮುಖ್ಯ ಶಿಕ್ಷಕ ಎ.ಎಂ. ಕುಲಕರ್ಣಿ ಸ್ವಾಗತಿಸಿದರು. ಮನೋಜ್ ಗಿರಗಾವಿ ಕಾರ್ಯಕ್ರಮ ನಿರೂಪಿಸಿದರು. ವಿ.ಎಚ್. ಕುಲಕರ್ಣಿ ವಂದಿಸಿದರು.



ಸಂಗಮೇಶ್ವರ ಸಂಸ್ಥೆ: ಇಲ್ಲಿಯ ಬಾಗಲಕೋಟೆ ರಸ್ತೆಯ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಿ.ಎಸ್. ಬಿರಾದಾರ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ಹಾಗೂ ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಲಾಯಿತು.



ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ಪರಿಸರ ಜಾಗೃತಿ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಮುಖ್ಯಾಧ್ಯಾಪಕ ಡಿ.ಎನ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿ.ಸಿ. ಪಾಟೀಲ ಅತಿಥಿಯಾಗಿದ್ದರು. ಶಿಕ್ಷಕರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.