ಚರಂಡಿ ನೀರು ಭೀಮಾ ನದಿಗೆ: ಆತಂಕದಲ್ಲಿ ನಾಗರಿಕರು

ಗುರುವಾರ , ಜೂಲೈ 18, 2019
29 °C

ಚರಂಡಿ ನೀರು ಭೀಮಾ ನದಿಗೆ: ಆತಂಕದಲ್ಲಿ ನಾಗರಿಕರು

Published:
Updated:

ಅಫಜಲಪುರ: ಪಟ್ಟಣದ 20 ವಾರ್ಡ್‌ಗಳಿಗೆ  ಪೂರೈಕೆ ಆಗುವ ಭೀಮಾನದಿಯ ಜಾಕ್‌ವೆಲ್ ಹತ್ತಿರ ಚರಂಡಿಯ ನೀರು ಸೇರುತ್ತಿರುವುದರಿಂದ ಪಟ್ಟಣದ ನಾಗರಿಕರು ಮಲಿನ ನೀರು ಕುಡಿಯುವಂತಾಗಿದೆ.  ಇದನ್ನು ತಡೆಯಲು ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುಭಾಸ ರೂಗಿ ಅವರು ಒತ್ತಾಯಿಸಿದ್ದಾರೆ.ಅವರು ಭಾನುವಾರ ಭೀಮಾ ನದಿಯ ಜಾಕವೆಲ್‌ಗೆ ಭೇಟಿ ನೀಡಿದ್ದರು. `ಪಟ್ಟಣದ ಚರಂಡಿ ನೀರು ಭೀಮಾ ನದಿಗೆ ಸೇರುತ್ತಿದೆ. ಅದೇ ನೀರನ್ನು ನಾವು ಕುಡಿಯುತ್ತಿದ್ದೇವೆ. ರೋಗ ರುಜಿಗಳು ಬರುವ ಭೀತಿ ಉಂಟಾಗಿದೆ.ತಕ್ಷಣ ಪಟ್ಟಣ ಪಂಚಾಯಿತಿ ಜಾಕವೆಲ್ ಹತ್ತಿರ ಚರಂಡಿ ಸೇರುತ್ತಿರುವುದನ್ನು ತಡೆಯಬೇಕು' ಎಂದ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry