ಚರಂಡಿ ಪಕ್ಕದಲ್ಲೊಂದು ಶಾಲೆಯ ಮಾಡಿ...

7

ಚರಂಡಿ ಪಕ್ಕದಲ್ಲೊಂದು ಶಾಲೆಯ ಮಾಡಿ...

Published:
Updated:
ಚರಂಡಿ ಪಕ್ಕದಲ್ಲೊಂದು ಶಾಲೆಯ ಮಾಡಿ...

ಚನ್ನರಾಯಪಟ್ಟಣ: ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಆವರಣದ ಮಧ್ಯ ಭಾಗದಲ್ಲಿ ಚರಂಡಿ ಹಾದು ಹೋಗಿರುವ ಚರಂಡಿ ದುರ್ನಾತ ಬೀರುತ್ತ್ದ್ದಿದು ಕಲಿಕಾ ಪರಿಸರಕ್ಕೆ ಕುತ್ತಾಗಿ ಪರಿಣಮಿಸಿದೆ.ಪ್ರೌಢಶಾಲೆಯಲ್ಲಿ 1250, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 220 ವಿದ್ಯಾರ್ಥಿಗಳಿದ್ದಾರೆ. ಚರಂಡಿ ಪಕ್ಕದಲ್ಲಿ ಹಿರಿಯ ಪ್ರಾಥಮಕ ಶಾಲೆಯ ಬಿಸಿಯೂಟ ಯೋಜನೆಯ ಅಡುಗೆ ಮನೆ ಇದೆ. ಅಡುಗೆ ತಯಾರಿಸುವರು ಸಹ ಚರಂಡಿ ವಾಸನೆ ಸೇವಿಸಬೇಕಿದೆ. ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ ಎಂಬ ಹೆಗ್ಗಳಿಕೆ ಪಡೆದಿರುವ ಪ್ರೌಢಶಾಲೆಯ ಮಕ್ಕಳು ಊಟ ಮಾಡಲು `ಬಾಲ ಭವನ~ ನಿರ್ಮಿಸಲಾಗಿದೆ.ಇಲ್ಲಿ ಮಕ್ಕಳು ಕುಳಿತು ಊಟ ಮಾಡುವಾಗಲು ದುರ್ವಾಸನೆ ಬೀರುತ್ತದೆ. ಇಂತಹ ವಾತಾವರಣದಲ್ಲಿ ಊಟ ಮಾಡುವ ಮಕ್ಕಳಲ್ಲಿ ಆರೋಗ್ಯ ಕಾಪಾಡಲು ಸಾಧ್ಯವೆ ಎಂಬ ಪ್ರಶ್ನೆ ಪೋಷಕರದು. ದುರ್ವಾಸನೆ ಬರುವ ಚರಂಡಿ ಪಕ್ಕ ದಲ್ಲಿ ಹೊಸದಾಗಿ ಉರ್ದು ಶಾಲೆಯ ಕಟ್ಟಡ  ನಿರ್ಮಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕಾಡುತ್ತಿದೆ.ಮೈದಾನದಲ್ಲಿ ಆಟ ಆಡುವಾ ಗಲೂ ದುರ್ವಾಸನೆ ವಿದ್ಯಾರ್ಥಿಗಳ ಮೂಗಿಗೆ ಬಡಿಯುತ್ತದೆ. ಶಾಲೆಗಳ ಕೂಗಳತೆ ದೂರದಲ್ಲಿ ಎರಡು ಕಲ್ಯಾಣ ಮಂಟಪಗಳಿವೆ. ಸದಾ ವಿವಾಹ ಅಥವಾ ಇತರ ಕಾರ್ಯಕ್ರಮ ಆಯೋಜಿಸುವಾಗ ಮೈಕಾಸುರನ ಹಾವಳಿ, ಆರ್ಕೇಸ್ಟ್ರಾಗಳಿಂದ ಶಾಲೆಯಲ್ಲಿ ಪಾಠ, ಪ್ರವಚನಕ್ಕೆ ತೊಂದರೆಯಾಗುತ್ತಿದೆ. ಶಿಕ್ಷಕರು ಪಾಠ ಮಾಡುವುದು ಮಕ್ಕಳಿಗೆ ಕೇಳುವುದಿಲ್ಲ.

 

ಅಲ್ಲದೇ ಮಕ್ಕಳ ಗಮನ ಅತ್ತ ಸೆಳೆಯುತ್ತದೆ. ಇದು ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶಬ್ಧಮಾಲಿನ್ಯದಿಂದ ಮುಕ್ತಿಗೊಳಿಸುವಂತೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೂ ಇದುವರೆಗೆ ಪ್ರಯೋಜನವಾಗಿಲ್ಲ.ಗೇಟುಗ ದುಸ್ಥಿತಿ: ಎರಡು ಶಾಲೆಗಳ ಗೇಟ್ ಮುರಿದಿರುವುದರಿಂದ ಶಾಲಾ ಅವಧಿ ಮುಗಿದ ಬಳಿಕ ಜೂಜಾಟ ದಂಥ ಕಾನೂನು ಬಾಹಿರ ಕೃತ್ಯಗಳು ಜರುಗತ್ತವೆ.ಈಗಾಗಲೇ ಬಾಗೂರು ರಸ್ತೆ ಯಿಂದ ಕಲ್ಯಾಣ ಮಂಟಪದವರೆಗೆ ಚರಂಡಿ ಮೇಲೆ ಸ್ಲ್ಯಾಬ್ ನಿರ್ಮಿಸಲಾಗಿದೆ. ಅದೇ ರೀತಿ ಶಾಲಾ ಆವರಣದಲ್ಲಿ ಹಾದು ಹೋಗಿರುವ ಚರಂಡಿ ಮೇಲೆ ಸ್ಲ್ಯಾಬ್ ನಿರ್ಮಿಸಿ ದುರ್ವಾಸನೆ ಬೀರುವುದನ್ನು ತಪ್ಪಿಸಬೇಕು. ಶಬ್ದ ಮಾಲಿನ್ಯ ಹಾಗೂ ಶಾಲಾ ಆವರಣದಲ್ಲಿ ಕಾನೂನು ಬಾಹಿರ ಕೃತ್ಯಕ್ಕೆ ಕಡಿವಾಣ ಹಾಕುವ ಮೂಲಕ ಪ್ರಶಾಂತ ವಾತಾವರಣದಲ್ಲಿ ಮಕ್ಕಳು ಪಾಠಕೇಳುವ ವಾತವಾರಣವನ್ನು ನಿರ್ಮಿಸಬೇಕಿದೆ ಎನ್ನುತ್ತಾರೆ ಶಿಕ್ಷಕ ವೃಂದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry