ಚರಿತ್ರೆ ಪುನರ‌್ರಚನೆ ನಿರಂತರವಾಗಿರಲಿ

7

ಚರಿತ್ರೆ ಪುನರ‌್ರಚನೆ ನಿರಂತರವಾಗಿರಲಿ

Published:
Updated:

ಕಲ್ಯಾಣಪುರ: `ಚರಿತ್ರೆಯ ಪುನರ‌್ರಚನೆ ನಿರಂತರವಾಗಿ ನಡೆಯಬೇಕು. `ಪ್ರಭು~ಗಳ ಇತಿಹಾಸ ರಚಿಸಲಾಗಿದ್ದು ಪ್ರಜೆಗಳ ಇತಿಹಾಸದ ಅಧ್ಯಯನ ಕೂಡ ನಡೆಸಬೇಕಾಗಿದೆ~ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಚರಿತ್ರೆ ವಿಭಾಗ ಮುಖ್ಯಸ್ಥ ಚಿನ್ನಸ್ವಾಮಿ ಸೊಸಲೆ ಹೇಳಿದರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಹಾಗೂ ತುಳುನಾಡಿನ ಶ್ರೇಷ್ಠ ಇತಿಹಾಸ ಸಂಶೋಧಕ ಪಾದೂರು ಗುರುರಾಜ್ ಭಟ್ ಸ್ಮಾರಣಾರ್ಥ ಇತ್ತೀಚೆಗೆ ಕಾಲೇಜಿನಲ್ಲಿ `ಸಮಕಾಲೀನ ಚರಿತ್ರೆ ಪುನರ‌್ರಚನೆ ಸಾಧ್ಯತೆ ಹಾಗೂ ಸವಾಲುಗಳು~ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ತುಳುನಾಡಿನ ಚರಿತ್ರೆ ರಚನೆಗೆ ಪಿ.ಗುರುರಾಜ್ ಭಟ್ ಕೊಡುಗೆ~ ಕುರಿತು ಇತಿಹಾಸ ವಿಭಾಗದ ಮುಖ್ಯಸ್ಥ ಜಯರಾಮ ಶೆಟ್ಟಿಗಾರ ಮಾತನಾಡಿದರು.  ಅಧ್ಯಕ್ಷತೆ ವಹಿಸಿದದ ಪ್ರಾಂಶುಪಾಲ ನೇರಿ ಕರ್ನೇಲಿಯೊ ಅವರು  ಸಂಶೋಧಕ ಗುರುರಾಜ್ ಭಟ್ ಅವರ ತರಗತಿಯ ನೆನಪುಗಳನ್ನು ಹಂಚಿಕೊಂಡರು.ದತ್ತಿನಿಧಿ ಸ್ಥಾಪಕರಾದ ಪ್ರೊ. ಜಿ.ಎಸ್. ರಾಮಚಂದ್ರ, ಮಾನವಿಕ ವಿಭಾಗದ ಡೀನ್ ಪ್ರೊ. ಮೆಲ್ಪಿನ್ ರೇಗೊ ಹಾಗೂ  ರೇಶ್ಮಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry