ಚರ್ಚಿಲ್ ಕಾರು 1.29 ಲಕ್ಷ ಪೌಂಡ್‌ಗೆ ಹರಾಜು

7

ಚರ್ಚಿಲ್ ಕಾರು 1.29 ಲಕ್ಷ ಪೌಂಡ್‌ಗೆ ಹರಾಜು

Published:
Updated:

ಲಂಡನ್ (ಪಿಟಿಐ): ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ 80ನೇ ಹುಟ್ಟುಹಬ್ಬಕ್ಕೆಂದು ವಿನ್ಯಾಸಗೊಳಿಸಿದ್ದ ಲ್ಯಾಂಡ್ ರೋವರ್ ಕಾರು ಭಾರಿ ಬೆಲೆಗೆ ಹರಾಜಾಗಿದೆ.ಹರಾಜಿನ ಮೊತ್ತ 1.29 ಲಕ್ಷ ಪೌಂಡ್.

ಕೆಂಟ್‌ನಲ್ಲಿನ ಅವರ ಚಾರ್ಟ್‌ವೆಲ್ ಎಸ್ಟೆಟ್‌ನಲ್ಲಿ ಸುತ್ತಾಡಲು ಈ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. 60 ಸಾವಿರ ಪೌಂಡ್‌ಗೆ ಹರಾಜಾಗುವ ನಿರೀಕ್ಷೆ ಇದೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಆದರೆ ಈಗ ನಿರೀಕ್ಷೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗಿದೆ.

ತನ್ನ ಹೆಸರು ಗೌಪ್ಯವಾಗಿರಲೆಂದು ಖರೀದಿ ಮಾಡಿದಾತ ಬಯಸಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry