ಚರ್ಚೆಗೆ ಇದು ಸಮಯವಲ್ಲ: ಬಿಜೆಪಿ ಟೀಕೆ

7

ಚರ್ಚೆಗೆ ಇದು ಸಮಯವಲ್ಲ: ಬಿಜೆಪಿ ಟೀಕೆ

Published:
Updated:

ನವದೆಹಲಿ (ಐಎಎನ್‌ಎಸ್‌): ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವ ರೊಂದಿಗೆ ಪ್ರಧಾನಿ ಸಿಂಗ್‌್ ಮಾತುಕತೆ ನಡೆಸುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತ ಪಡಿಸಿದೆ.ಎರಡು ದೇಶಗಳ ನಡುವೆ ದ್ವೇಷಮಯ ವಾತಾವರಣ ಇರುವಾಗ ಶಾಂತಿ ಮಾತುಕತೆಗೆ ಇದು ಸೂಕ್ತ ಸಮಯವೇ ಎಂದು ಬಿಜೆಪಿ ಹಿರಿಯ ನಾಯಕ ಯಶವಂತ್‌ ಸಿನ್ಹಾ ಪ್ರಶ್ನಿಸಿದ್ದಾರೆ.ಮುಂಬೈ ಮೇಲಿನ ದಾಳಿ (26/11) ಸೇರಿದಂತೆ 2004ರಿಂದ ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದೆ. ಇತ್ತೀಚೆ ಗಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಭಾರತದ ಯೋಧರ ಮೇಲೆ ದಾಳಿ ನಡೆಸಿದೆ. ಇದನ್ನು ಸಹಿಸಲಾಗದು. ಆದ್ದರಿಂದ ಪಾಕಿಸ್ತಾನ ಜತೆ ಸಿಂಗ್‌ ಅವರು ಮಾತುಕತೆ ನಡೆಸುವುದು ಸೂಕ್ತವಲ್ಲ ಎಂದು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆ ಒಟ್ಟಿಗೆ ಸಾಗಲಾರವು. ಇದು   ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೇ ಮನವರಿಕೆಯಾಗಿದೆ ಎಂದು ಸಿನ್ಹಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry