ಚರ್ಚೆಗೆ ಗ್ರಾಸವಾದದಢೂತಿ ಐಶ್ವರ್ಯ

7

ಚರ್ಚೆಗೆ ಗ್ರಾಸವಾದದಢೂತಿ ಐಶ್ವರ್ಯ

Published:
Updated:

ನವದೆಹಲಿ (ಪಿಟಿಐ): ಬಾಲಿವುಡ್ ನಟಿ ಐಶ್ವರ್ಯ ರೈ ಮಗುವೊಂದಕ್ಕೆ ಜನ್ಮ ನೀಡಿದ ಐದು ತಿಂಗಳ ನಂತರ ದೇಹದಲ್ಲಾಗಿರುವ ಬದಲಾವಣೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮಾಜಿ ವಿಶ್ವ ಸುಂದರಿ ಭಾರಿ ದಪ್ಪವಾಗಿರುವ ಹಿನ್ನೆಲೆಯಲ್ಲಿ ಆಕೆ ಸೊಸೆಯಾಗಿರುವ ಬಚ್ಚನ್ ಕುಟುಂಬ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.ಆದರೆ 38 ವರ್ಷದ ಈ ನಟಿಯನ್ನು ಬಲ್ಲ ಚಿತ್ರರಂಗದ ಕೆಲವು ಸಹೋದ್ಯೋಗಿಗಳು ಆಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೆರಿಗೆಯ ನಂತರ ಮಹಿಳೆಯರು ಇದೇ ರೀತಿ ದಢೂತಿಯಾಗಿ ಕಾಣಿಸುವುದಾಗಿ ಸಾಮಾನ್ಯ ಎಂದಿದ್ದಾರೆ.ವಸ್ತ್ರ ವಿನ್ಯಾಸಕರು ಕೂಡ ಹೊಸ ಉಡುಪು ಸಿದ್ಧಪಡಿಸಲು ಕಾತುರರಾಗಿದ್ದಾರೆ.

ಮಗುವಾದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅವರು, ಇತ್ತೀಚೆಗೆ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರು ಏರ್ಪಡಿಸಿದ್ದ ಸಂತೋಷಕೂಟದಲ್ಲಿ ಎಲ್ಲರ ಕಣ್ಣಿಗೆ ಬಿದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry