ಚರ್ಚ್ ದಾಳಿ: ಮೃತರ ಸಂಖ್ಯೆ 83ಕ್ಕೆ

7

ಚರ್ಚ್ ದಾಳಿ: ಮೃತರ ಸಂಖ್ಯೆ 83ಕ್ಕೆ

Published:
Updated:

ಇಸ್ಲಾಮಾಬಾದ್‌ (ಪಿಟಿಐ): ಪೆಶಾವರದ ಚರ್ಚ್ ಮೇಲೆ ತಾಲಿಬಾನ್‌ ಉಗ್ರರು ನಡೆಸಿರುವ ಬಾಂಬ್‌ ದಾಳಿ ಖಂಡಿಸಿ ಕ್ರಿಶ್ಚಿಯನ್ನರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಪಾಕಿಸ್ತಾನ ದಾದ್ಯಂತ ಪ್ರತಿಭಟನೆ ನಡೆಸಿದರು.ಈ ದುಷ್ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮಡಿದವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ಈ ಮಧ್ಯೆ, ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 83ಕ್ಕೆ ಏರಿದೆ.  ತೆಹ್ರಿಕ್‌-ಇ ತಾಲಿಬಾನ್‌ ಪಾಕಿಸ್ತಾನ್‌ ಸಂಘಟನೆಯ ಅಂಗಸಂಸ್ಥೆಯಾದ ಜಂದುಲ್ಲಾಹ್‌ ಸಂಘಟನೆಯು ದಾಳಿ ಹೊಣೆ ಹೊತ್ತಿದ್ದು, ಅಮೆರಿಕ ನಡೆಸುತ್ತಿರುವ ಡ್ರೋನ್‌ ದಾಳಿಗೆ ಪ್ರತೀಕಾರವಾಗಿ ಸ್ಫೋಟ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry