ಚರ್ಮ ಕ್ಯಾನ್ಸರ್‌ಗೆ ಹೊಸ ಮುಲಾಮು

7

ಚರ್ಮ ಕ್ಯಾನ್ಸರ್‌ಗೆ ಹೊಸ ಮುಲಾಮು

Published:
Updated:

ಮೆಲ್ಬರ್ನ್(ಪಿಟಿಐ): ಚರ್ಮ ಕ್ಯಾನ್ಸರ್ ಚಿಕಿತ್ಸೆಗೆ ಔಷಧವಾಗುವ ಕ್ರೀಮ್ (ಮುಲಾಮು) ಒಂದನ್ನು ಆಸ್ಟ್ರೇಲಿಯಾ ವಿಜ್ಞಾನಿಗಳು ಅನುಶೋಧಿಸುತ್ತಿದ್ದಾರೆ.  ಈ ಕ್ರೀಮ್ ತಯಾರಿಕೆಗೆ ಬಳಸುವ ಹೊಸ ರಾಸಾಯನಿಕವನ್ನು ಅನುಶೋಧಿಸಿರುವ ಮೆಲ್ಬರ್ನ್ ಮೂಲದ ಆರ್‌ಎಂಐಟಿ ವಿಶ್ವವಿದ್ಯಾಲಯದ ಸಂಶೋಧಕರು, ಚರ್ಮ ವ್ಯಾಧಿಗೆ ಕಾರಣವಾಗುವ ಕೋಶಗಳನ್ನು ಕೊಲ್ಲುವಂತಹ ಗುಣ ಈ ರಾಸಾಯನಿಕದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



`ಕ್ರೀಮ್‌ಗೆ ಸೇರಿಸುವ ರಾಸಾಯನಿಕದಲ್ಲಿ ಚರ್ಮದ ಸಾಮಾನ್ಯ ಕೋಶಗಳಿಗೆ ಹಾನಿ ಮಾಡದೇ ಕ್ಯಾನ್ಸರ್ ಹರಡುವ ಕೋಶಗಳನ್ನು ಪರಿಣಾಮಕಾರಿಯಾಗಿ ನಾಶಪಡಿಸುವ ಗುಣವಿದೆ~ ಎಂದು ಹೇಳಿದ್ದಾರೆ.

`ಪ್ರಾಥಮಿಕ ಹಂತದ ಪರಿಣಾಮಗಳನ್ನು ಗಮನಿಸಿದರೆ ಆರಂಭಿಕ ಹಂತದ ಚರ್ಮ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವಂತಹ ಕ್ರೀಮ್ ಅನ್ನು ಈ ರಾಸಾಯನಿಕದಿಂದ ತಯಾರಿಸಬಹುದಾಗಿದೆ~ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಡಾ. ತಘ್ರಿಡ್ ಇಸ್ತಿವಾನ್ ಅಭಿಪ್ರಾಯಪಟ್ಟಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.



`ಈ ರಾಸಾಯನಿಕ ಚರ್ಮದ ಕ್ಯಾನ್ಸರ್ ಹರಡುವ ಮೆಲನೋಮಾದಂತಹ ವೈರಸ್ ವಿರುದ್ಧವಷ್ಟೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಆದರೆ ಸಾಮಾನ್ಯ ಕೋಶಗಳಿಗೆ ತೊಂದರೆ ಮಾಡುವುದಿಲ್ಲ~ ಎಂದು ತಘ್ರಿಡ್ ಹೇಳಿದ್ದಾರೆ.ಪ್ರಸ್ತುತ ಆರಂಭಿಕ ಹಂತದ ಚರ್ಮದ ಕ್ಯಾನ್ಸರ್ ರೋಗವನ್ನು ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry