ಚಲನಚಿತ್ರೋತ್ಸವಕ್ಕೆ ತಾರಾ ಮೆರುಗು

7

ಚಲನಚಿತ್ರೋತ್ಸವಕ್ಕೆ ತಾರಾ ಮೆರುಗು

Published:
Updated:

ಮೈಸೂರು: ಅ.16ರಂದು ಕಲಾ ಮಂದಿರ ದಲ್ಲಿ ಸಂಜೆ 4ಗಂಟೆಗೆ ಆಯೋಜಿಸಿರುವ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಗಣ್ಯರನ್ನು ಗೌರವಿಸಲಾಗುತ್ತಿದೆ.ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಖ್ಯಾತ ನಟ ಶಿವರಾಜ್‌ಕುಮಾರ್, ಕಿರುತೆರೆ ನಟ ನಿರ್ದೇಶಕ ಬಿ. ಸುರೇಶ್, ಖ್ಯಾತ ನಟಿ ಸುಧಾರಾಣಿ, ರಮ್ಯ, ಹಿರಿಯ ಕಲಾವಿದ ಸುಂದರ್‌ರಾಜ್, ಚಲನ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ಸಂಗೀತ ನಿರ್ದೇಶಕ ರಾಜನ್, ಹಿರಿಯ ಕಲಾವಿದ ದೊಡ್ಡಣ್ಣ, ಡಿಂಗ್ರಿ ನಾಗರಾಜ್ ಅವರನ್ನು ಗೌರವಿಸಲಾಗುತ್ತಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ಚಲನಚಿತ್ರ ಉಪಸಮಿತಿ ಅಧ್ಯಕ್ಷೆ  ಹಾಗು ಚಲನಚಿತ್ರ ಅಕಾಡೆಮಿ ಅಧ್ಯಕ್ಕೆ ತಾರಾ, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಸೇರಿ ದಂತೆ ಶಾಸಕರು, ಸಂಸದರು, ಜನ ಪ್ರತಿನಿಧಿಗಳು ಭಾಗವಹಿಸುವರು.ವಾರ್ತಾಭವನದಲ್ಲಿ ಶುಕ್ರವಾರ ಚಲನಚಿತ್ರೋತ್ಸವ ಉಪಸಮಿತಿ ಉಪಾಧ್ಯಕ್ಷರು ಹಾಗೂ ಸದಸ್ಯರ ಸಭೆ ನಡೆದು ಸಮಾರಂಭ ಅಚ್ಚುಕಟ್ಟಾಗಿ ಏರ್ಪಡಿಸುವ ಕುರಿತು ಚರ್ಚಿಸಿ ವಿವಿಧ ಸಂಘಟನಾ ಸಮಿತಿ ರಚಿಸಲಾಯಿತು.ಚಲನಚಿತ್ರೋತ್ಸವ ಸಮಿತಿ ಸದಸ್ಯ ಹಾಗೂ ಖ್ಯಾತ ನಟ ಮಂಡ್ಯ ರಮೇಶ್ ಮತ್ತು ಇತರ ಸದಸ್ಯರು ಚಲನಚಿತ್ರೋತ್ಸವ ಯಶಸ್ವಿ ಗೊಳಿಸಲು ಹಲವು ಸಲಹೆ ನೀಡಿ ದರು. ವಿಶೇಷಾಧಿಕಾರಿ ರಾಮು, ಉಪಾ ಧ್ಯಕ್ಷ ರಾದ ರವಿಕುಮಾರ್, ಬಲರಾಮ್, ಮುರಳಿಧರ್ ಹಾಲಪ್ಪ, ಕಾರ್ಯಾಧ್ಯಕ್ಷ ಎ.ಆರ್ ಪ್ರಕಾಶ್, ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸ್ ಇದ್ದರು.ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ

ಮೈಸೂರು ದಸರಾ ಚಲನ ಚಿತ್ರೋತ್ಸವ ಸಮಿತಿಯು ಈ ಬಾರಿಯ ನಾಡಹಬ್ಬ ದಸರಾ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳು ಮತ್ತು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ ಏರ್ಪಡಿಸಿದೆ.ಕನ್ನಡ ಚಲನ ಚಿತ್ರೋತ್ಸವ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಹಾಗೂ ವಿಶ್ವದ ಇತರ ಭಾಷೆಯ ಚಿತ್ರಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಅಕ್ಟೋಬರ್ 16 ರಿಂದ 22 ರವರೆಗೆ ಪ್ರದರ್ಶಿಸಲಾಗುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆಯುವ ವಿಶ್ವದ ಬೇರೆ ಬೇರೆ ಭಾಷೆಯ ಉತ್ತಮ ಚಲನಚಿತ್ರಗಳ ಪ್ರದರ್ಶನಕ್ಕೆ ಗಯಟೆ ಇನ್‌ಸ್ಟಿಟ್ಯೂಟ್/ಮ್ಯೋಕ್ಸ್ ಮುಲ್ಲರ್ ಭವನ್,ಅಲಯನ್ಸ್ ಫ್ರಾನ್ಚೈಸ್, ಬೆಂಗಳೂರು,ಎನ್‌ಲೈಟನ್ ಫಿಲ್ಮ್ಸ್  ಹಾಗೂ  ಮೈಸೂರು ಫಿಲ್ಮ್ ಸೊಸೈಟಿ  ಸಹಕಾರ ನೀಡಿವೆ ಎಂದು ಮೈಸೂರು ಫಿಲಂ ಸೊಸೈಟಿ ಕಾರ್ಯದರ್ಶಿ ಮನು ತಿಳಿಸಿದ್ದಾರೆ.ಚಿತ್ರೋತ್ಸವ ಸಮಗ್ರ ಭಾಷೆಯಲ್ಲಿ ಸೃಷ್ಟಿಸಿದ ಸಿನಿಮಾಗಳ ಉತ್ಸವವಾಗಿದೆ. ಮನರಂಜನೆ ಪ್ರಧಾನ ವಾಗಿರುವ ಚಲನಚಿತ್ರ ಗಳ ಜತೆಗೆ ಚಿಂತನೆ ಮತ್ತು ಸೌಂದರ್ಯಾ ಸ್ವಾದನೆ ಮುಖ್ಯ ಉದ್ದೇಶವಾಗಿರುವ ಕಲಾತ್ಮಕ ಚಲನಚಿತ್ರ ಸಹ ದಸರಾ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುತ್ತಿವೆ.ಚೋಮನದುಡಿ, ಅಬಚೂರಿನ ಪೋಸ್ಟ್ ಆಫೀಸು, ಕಾಡು, ಸಂಸ್ಕಾರ, ಸಂಧ್ಯಾರಾಗ, ಪಲ್ಲವಿ, ಗ್ರಹಣ, ಕಾಡು ಕುದುರೆ, ಫಣಿಯಮ್ಮ, ತಬರನ ಕಥೆ, ಹರಕೆಯ ಕುರಿ, ಬೇರು, ಕಾಕನಕೋಟೆ, ಹಸೀನಾ. ಪುಟ್ಟಕ್ಕನ ಹೈವೇ, ಭಾಗೀರಥಿ ಮೊದಲಾದ ಚಿತ್ರಗಳು  ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುತ್ತಿವೆ.ವಿಶ್ವದ ಇತರ ಭಾಷೆಯ ಅತ್ಯುತ್ತಮ ಚಿತ್ರಗಳಾದ ಬೈಸಿಕಲ್ ಥೀವ್ಸ್, ವೈಲ್ಡ್ ಸ್ಟ್ರಾಬೆರೀಸ್ ಚಿತ್ರ ಚಿತ್ರೋತ್ಸವದಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry