ಚಲನಚಿತ್ರ ಪ್ರಶಸ್ತಿ ಆಯ್ಕೆಗೆ ಭಗವಾನ್ ಸಮಿತಿ

7

ಚಲನಚಿತ್ರ ಪ್ರಶಸ್ತಿ ಆಯ್ಕೆಗೆ ಭಗವಾನ್ ಸಮಿತಿ

Published:
Updated:

ಬೆಂಗಳೂರು: 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಚಿತ್ರ ನಿರ್ದೇಶಕ ಭಗವಾನ್ ಅಧ್ಯಕ್ಷತೆಯಲ್ಲಿ ಹೊಸ ಆಯ್ಕೆ ಸಮಿತಿ ರಚಿಸಿದ್ದು, ಈ ಮಾಹಿತಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸೋಮವಾರ ಪ್ರಮಾಣಪತ್ರದಲ್ಲಿ ಸಲ್ಲಿಸಿದೆ.ಈ ಹಿಂದೆ ರಚಿಸಿದ್ದ ಆಯ್ಕೆ ಸಮಿತಿ ಕಾನೂನಿಗೆ ಅನುಗುಣವಾಗಿ ಇಲ್ಲ ಎಂದು ದೂರಿ ಬಸಂತ ಕುಮಾರ ಪಾಟೀಲ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೆಲವು ಚಲನಚಿತ್ರಗಳಲ್ಲಿ ಒಂದಲ್ಲ ಒಂದು ಪಾತ್ರ ನಿರ್ವಹಿಸಿರುವವರನ್ನೇ ಆಯ್ಕೆ ಸಮಿತಿಗೂ ನೇಮಕ ಮಾಡಲಾಗಿದೆ. ಇದು ಸರಿಯಲ್ಲ ಎಂಬುದು ಅವರ ಆರೋಪವಾಗಿತ್ತು.ಇದರ ವಿಚಾರಣೆ ವೇಳೆ, ಆಯ್ಕೆ ಸಮಿತಿಯನ್ನು ಹಿಂಪಡೆಯುವುದಾಗಿ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಈಗ ಹೊಸ ಸಮಿತಿ ರಚಿಸಿದೆ.ಸಮಿತಿಯ ಸದಸ್ಯರು: ಬಾನಂದೂರು ಕೆಂಪಯ್ಯ, ಆರ್. ಮಂಜುನಾಥ್, ಜಿ.ಎನ್. ಮೋಹನ್, ಅಬ್ದುಲ್ ರೆಹಮಾನ್ ಪಾಷ, ಪದ್ಮಾ ಕುಮಟ, ರಾಧಾಕೃಷ್ಣ ಪಲ್ಲಕ್ಕಿ, ಪರಮೇಶ್ವರ ಗುರುಸ್ವಾಮಿ ಮತ್ತು ರಂಗಸ್ವಾಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry