ಮಂಗಳವಾರ, ಏಪ್ರಿಲ್ 20, 2021
24 °C

ಚಲನಚಿತ್ರ ಪ್ರಶಸ್ತಿ ಮಾನದಂಡ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾನ್ಯ ಪ್ರೇಕ್ಷಕರು ನೋಡಲಾಗದ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಿಗುತ್ತದೆ ಎಂಬುದು 2009-10ನೇ ಸಾಲಿನ ಪ್ರಶಸ್ತಿ ಪಟ್ಟಿಯಲ್ಲಿ ಸ್ಪಷ್ಟವಾಗಿದೆ. ಮೊದಲ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದಿರುವ `ರಸಋಷಿ~ ಹೇಗಿದೆ ಎಂಬುದು ನನಗೆ ಗೊತ್ತಿಲ್ಲ. ಅದು ಬಿಡುಗಡೆಯೇ ಆಗಿಲ್ಲ.ಯಾವ ಚಿತ್ರಮಂದಿರಗಳಲ್ಲೂ ಬಿಡುಗಡೆ ಕಾಣದ ಚಿತ್ರವೊಂದನ್ನು ಸಾಮಾಜಿಕ ಪರಿಣಾಮ ಬೀರಿದ ಚಿತ್ರವೆಂದು ಹೇಗೆ ತೀರ್ಮಾನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತೆಂಬುದು ದೊಡ್ಡ ಜಿಜ್ಞಾಸೆ. ಇದೆಲ್ಲ ಪ್ರತಿವರ್ಷದ ಪ್ರಹಸನದಂತೆ ತೋರುತ್ತದೆ.ಶ್ರೇಷ್ಠ ನಟನೆ ಮರಣೋತ್ತರ ಪ್ರಶಸ್ತಿ ಯಾವತ್ತಿನಿಂದ ಆರಂಭವಾಗಿದೆಯೋ ತಿಳಿಯದು. ನಾನು ಮಲ್ಟಿಪ್ಲೆಕ್ಸ್‌ನಲ್ಲಿ `ಕನಸೆಂಬೋ ಕುದುರೆಯನೇರಿ~ ಚಿತ್ರವನ್ನು ನೋಡಿದ್ದೆ. ಬಿರಾದಾರ್ ನಟನೆ ನಿಜಕ್ಕೂ ಅದ್ಭುತವಾಗಿದೆ. ಅವರಿಗೆ ಜೀವಮಾನದಲ್ಲಿ ಅಂಥ ಅವಕಾಶ ಸಿಗುತ್ತದೋ ಇಲ್ಲವೋ? ಕನ್ನಡವೇ ಬಾರದ, ತಮಿಳು ಮೂಲದ ಗಾಯಕ ಟಿಪ್ಪು ಅವರಿಗೆ ಕೊಟ್ಟಿರುವ ಪ್ರಶಸ್ತಿ ಹೊಸ ಪರಂಪರೆ. ಮುಂದೆ ಸೋನು ನಿಗಮ್ ಕೂಡ ಪ್ರಶಸ್ತಿಗೆ ಅರ್ಹರಾಗುತ್ತಾರಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.