ಗುರುವಾರ , ಜೂನ್ 24, 2021
28 °C

ಚಲನಚಿತ್ರ ಮನರಂಜನೆಗೆ ಸೀಮಿತವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಚಲನಚಿತ್ರ ಮನ ರಂಜನೆಗೆ ಸೀಮಿತವಾಗದೆ ಸಮಾಜದ ವಿಕಾಸಕ್ಕೆ ಕಾರಣವಾಗಬೇಕೆಂದು ಚಲನ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ತಿಳಿಸಿದರು.ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಕಟ್ಟೆರಂಗಪ್ಪನ ಗುಡಿಯ ಆವರಣದಲ್ಲಿ ಕೆಂಡಸಂಪಿಗೆ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಚಿತ್ರ ಸಮೂಹದ ವತಿಯಿಂದ  ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ನಡೆದ ಹಳ್ಳಿಗಾಡಿನ ಚಿತ್ರ ಹಬ್ಬ ಉದ್ಘಾ ಟಿಸಿ ಮಾತನಾಡಿ, ಇಂದು ಹೆಚ್ಚು ಚಲನ ಚಿತ್ರಗಳು ಮನರಂಜನೆಗೆ ಮಾತ್ರ ಸೀಮಿತವಾಗಿವೆ ಎಂದರು.ಮಕ್ಕಳನ್ನು ಚಾರಿತ್ರ್ಯವಂತರನ್ನಾಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ 22 ಜಿಲ್ಲೆಗಳಲ್ಲಿ 109 ಶಾಲೆಗಳಲ್ಲಿ ವಿಲ್‌ಕ್ಲಬ್‌ಗಳನ್ನು ರಾಜ್ಯ ಚಲನಚಿತ್ರ ಅಕಾಡೆಮಿ ವತಿಯಿಂದ ಆರಂಭಿಸಲಾಗಿದೆ ಎಂದರು. ಚಿತ್ರ ನಿರ್ದೆಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಇಂದು ದೃಶ್ಯ ಮಾಧ್ಯಮ ಗಳಿಂದ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಧಕ್ಕೆ ಬರುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂದು ವಿಷಾದಿಸಿದರು.ಹೊಗೆರಹಿತ ಒಲೆ ನಿರ್ಮಾತೃ ಹಾಲ್ಕುರಿಕೆ ಲಲಿತಾಬಾಯಿ ಮಾತನಾಡಿ ದರು. ಚರ್ಚಾ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸ ಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್ ಕುಮಾರ, ಸದಸ್ಯ ದಯಾನಂದ್, ಡಾ.ರಘುಪತಿ ಉಪಸ್ಥಿತ ರಿದ್ದರು. ಗೌಸಿ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.