ಚಲಿಸುತ್ತಿದ್ದ ರೈಲಿನಿಂದ ತಳ್ಳಿ ವಿದ್ಯಾರ್ಥಿನಿ ಹತ್ಯೆ

7

ಚಲಿಸುತ್ತಿದ್ದ ರೈಲಿನಿಂದ ತಳ್ಳಿ ವಿದ್ಯಾರ್ಥಿನಿ ಹತ್ಯೆ

Published:
Updated:

ಬುರದ್ವಾನ್/ ಪಶ್ಚಿಮ ಬಂಗಾಳ (ಪಿಟಿಐ): ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳನ್ನು ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ತಳ್ಳಿ, ಹತ್ಯೆ ಮಾಡಿರುವ ದಾರುಣ ಘಟನೆ ಬುರದ್ವಾನ್ ಜಿಲ್ಲೆಯ ಕಲ್ನಾ ಎಂಬಲ್ಲಿ ನಡೆದಿದೆ.ಮೃತಪಟ್ಟಿರುವ ವಿದ್ಯಾರ್ಥಿಯನ್ನು ಸಮುದ್ರಗಾರ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಜಯ್ ಬಸಕ್ ಎಂದು ಗುರುತಿಸಲಾಗಿದ್ದು, ಈಕೆ ಖಾಸಗಿ ಪಾಠ ಮುಗಿಸಿ ತನ್ನ ಸಹಪಾಠಿಗಳ ಜತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ತನ್ನನ್ನು ಚುಡಾಯಿಸಿದ ಯುವಕನನ್ನು ವಿರೋಧಿಸಿದಾಗ ಆತ ಬಾಲಕಿಯನ್ನು ಬಲವಂತವಾಗಿ ರೈಲಿನಿಂದ ಹೊರತಳ್ಳಿದ್ದಾನೆ ಎಂದು ಆಕೆಯ ಸಹಪಾಠಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಆರೋಪಿ ಪರಾರಿಯಾಗಿದ್ದು, ಪತ್ತೆ ಕಾರ್ಯಾ ನಡೆಯುತ್ತಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry