ಚಲಿಸುವ ಕಾರಿನಲ್ಲಿ ಅತ್ಯಾಚಾರ

ಸೋಮವಾರ, ಜೂಲೈ 22, 2019
24 °C

ಚಲಿಸುವ ಕಾರಿನಲ್ಲಿ ಅತ್ಯಾಚಾರ

Published:
Updated:

ಮೀರತ್ (ಪಿಟಿಐ): ಬಿಎಸ್‌ಪಿ ನಾಯಕ ಸೇರಿದಂತೆ ನಾಲ್ವರು ಯುವಕರು ದ್ವಿತೀಯ ಪಿಯುಸಿ ಯುವತಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಶನಿವಾರ ನಡೆದಿದೆ.ಶಾಸ್ತ್ರಿನಗರದಲ್ಲಿ ವಾಸಿಸುತ್ತಿರುವ ಯುವತಿ, ಶನಿವಾರ ಸಂಜೆ 7 ಘಂಟೆಗೆ ಟ್ಯೂಷನ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಡ್ಡಹಾಕಿದ ನಾಲ್ವರು ಯುವಕರು ಎಸ್‌ಯುವಿ ಕಾರಿನಲ್ಲಿ ಅಪಹರಿಸಿ ನಂತರ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತರ ಲಕ್ಷ್ಮೀವಿಹಾರ ನಗರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ಮತ್ತೊಮ್ಮೆ ಅತ್ಯಾಚಾರ ಎಸಗಿ ಹತ್ತಿರದ ಪಿವಿಎಸ್ ಮಾಲ್‌ನಲ್ಲಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.ಯುವತಿಯ ಮನೆಗೆ ಹೋದ ಆರೋಪಿಗಳು ಈ ವಿಷಯವನ್ನು ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಯುವತಿ ಹಾಗೂ ಆಕೆಯ ಸಹೋದರನಿಗೆ ಹೆದರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.  ಯುವತಿ ಇಬ್ಬರು ಯುವಕರ ಗುರುತನ್ನು ಪತ್ತೆ ಹಚ್ಚಿದ್ದು, ಅವರು ಅಮಿತ್ ಭದಾನಾ ಮತ್ತು ಸುಮಿತ್ ಗುರ್ಜುರ್ ಎಂದು ಹೇಳಲಾಗಿದೆ. ಬಿಎಸ್‌ಪಿ ಮುಖಂಡ ಕೂಡ ಭಾಗಿಯಾಗಿರುವುದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry