ಚಳವಳಿಯೇ ಸಾಧನ

7

ಚಳವಳಿಯೇ ಸಾಧನ

Published:
Updated:
ಚಳವಳಿಯೇ ಸಾಧನ

ಯಾದಗಿರಿ:  ಸಮಾಜದಲ್ಲಿ ಪ್ರಗತಿಶೀಲ ಶಕ್ತಿಗಳನ್ನು ಒಗ್ಗೂಡಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಚಳವಳಿ ಒಂದೇ ಸಾಧನವಾಗಿದೆ ಎಂದು ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅಭಿಪ್ರಾಯಪಟ್ಟರು. ಡಾ. ಬಿ.ಆರ್. ಅಂಬೇಡ್ಕರ್ ಟ್ರಸ್ಟ್, ತಥಾಗತ ಗೌತಮ ಬುದ್ಧ ಟ್ರಸ್ಟ್, ಕಿರಣ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆನಂದ ಶಿವಯೋಗಿ ಟ್ರಸ್ಟ್‌ಗಳ ಆಶ್ರಯದಲ್ಲಿ ಭಾನುವಾರ ನಗರದ ಚರ್ಚ್ ಹಾಲ್‌ನಲ್ಲಿ ಆಯೋಜಿಸಿದ್ದ ದಲಿತ ಚಳವಳಿಗಳ ಮುಂದಿರುವ ಸವಾಲುಗಳ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಪೌರೋಹಿತ್ಯದ ಅಂದಿನ ಕಾಲದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರಿಗೆ ಯಾವುದೇ ಬೆಂಬಲ ಇರಲಿಲ್ಲ. ಮಾನಸಿಕ ಸಿದ್ಧತೆಗಳು, ನಾಯಕತ್ವದ ಗುಣಗಳಿಂದ ಇಡೀ ಜಗತ್ತನ್ನೇ ಬೆಳಗಿದ ಡಾ. ಅಂಬೇಡ್ಕರ್‌ರು ಗೌತಮ ಬುದ್ಧರ ಆದರ್ಶಗಳನ್ನು ಪಾಲಿಸಿ, ಇಂದಿಗೂ ಇಡೀ ಜಗತ್ತಿಗೆ ದಾರಿದೀಪವಾಗಿದ್ದಾರೆ. ಅವರಿಂದ ನಾವೆಲ್ಲರೂ ಸಾಮಾಜಿಕ ಪ್ರಜ್ಞೆಯನ್ನು ಕಲಿಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ಡಾ. ವೀರಬಸವಂತ ರೆಡ್ಡಿ ಮುದ್ನಾಳ ಮಾತನಾಡಿ, ದಲಿತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ನಿರಂತರವಾಗಿ ಶೋಷಿತರ ಧ್ವನಿಯಾಗಿ ಮುಂದೆ ಬಂದಾಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿದೆ ಎಂದು ಹೇಳಿದರು.ಹಂಪಿ ವಿವಿ ಪ್ರಾಧ್ಯಾಪಕ ಡಾ ಎಚ್.ಕೆ. ನಾಗೇಶ ಮಾತನಾಡಿ, ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಸಾಮಾ ಜಿಕ ಚಳವಳಿಗಳಿಂದ ಪರಿವರ್ತನೆ ಗಳಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ನಮ್ಮ ದೇಶ ಇಂದಿಗೂ ಹಲವಾರು ಜಿಡ್ಡು ಸಂಪ್ರದಾಯಗಳ ಮಡುವಿನಲ್ಲಿ ನರಳಾಡುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕು ಎಂದು ಸಲಹೆ ಮಾಡಿದರು.ಗಾಳೆಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ದೇವೀಂದ್ರ ಹೆಗಡೆ, ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ, ಜಿ.ಪಂ. ಮಾಜಿ ಸದಸ್ಯ ಖಂಡೆಪ್ಪ ದಾಸನ್, ನೀಲಕಂಠ ಬಡಿಗೇರ, ಸಾಯಿಬಣ್ಣ ಸುಂಗಲಕರ, ಮಲ್ಲಿಕಾರ್ಜುನ ಪೂಜಾರಿ, ದೇವಿಂದ್ರ ಶರ್ಮ, ಮಾತನಾಡಿದರು. ಶಂಕರ ಸಾಗರ, ನಾಗಣ್ಣ ಬಡಿ ಗೇರ, ಡಾ. ಭೀಮರಾಯ ಲಿಂಗೇರಿ, ಶ್ರೀಶೈಲ ಹೊಸಮನಿ, ಶಿವಕುಮಾರ, ಶಿವು ಕುರಕುಂಬಳ್, ರಮೇಶ ಮುಂಡಾಸ್ ಮುಂತಾದವರು ಪಾಲ್ಗೊಂಡಿದ್ದರು. ವಿದ್ಯಾಧರ ಕಾಂಬ್ಳೆ ನಿರೂಪಿಸಿ ದರು. ಮಲ್ಲಿನಾಥ ಸುಂಗಲಕರ ಸ್ವಾಗತಿಸಿದರು. ಸಿದ್ಧಪ್ಪ ಲಿಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲೇಶ ಕುರಕುಂದಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry