ಚಳವಳಿ: ಕಾವೇರಿ ನೀರು ಪೂರೈಕೆ ವ್ಯತ್ಯಯ

7

ಚಳವಳಿ: ಕಾವೇರಿ ನೀರು ಪೂರೈಕೆ ವ್ಯತ್ಯಯ

Published:
Updated:

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ಹಿನ್ನೆಲೆಯಲ್ಲಿ ಮಂಗಳವಾರ ಕೆಲವು ಹೊತ್ತು ಕಾವೇರಿ ನೀರು ಪಂಪ್ ಮಾಡುವುದು ಸ್ಥಗಿತಗೊಂಡಿತು. ಇದರಿಂದಾಗಿ ಬುಧವಾರ ನಗರದಾದ್ಯಂತ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಪ್ರತಿದಿನ ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ ನೀರು ಪೂರೈಕೆ ಮಾಡಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ನೂರಾರು ರೈತರು ತೊರೆಕಾಡನಹಳ್ಳಿ ಕಾವೇರಿ ನೀರು ಪಂಪ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ನೀರು ಹರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ, ಒಂದು ಗಂಟೆ ಆರು ಯಂತ್ರಗಳನ್ನು ಬಂದ್ ಮಾಡಲು ಒಪ್ಪಿಗೆ ಸೂಚಿಸಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.ಇದರಿಂದಾಗಿ ಸುಮಾರು ಹೊತ್ತು ನೀರು ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದಾಗಿ ನಗರದ ವಿವಿಧೆಡೆ ಮಂಗಳವಾರವೂ ನೀರು ಪೂರೈಕೆಯಲ್ಲಿ ಸ್ಥಗಿತವಾಗಿತ್ತು. ಇದರಿಂದಾಗಿ ಬುಧವಾರವೂ ನಗರದ ವಿವಿಧೆಡೆ ನೀರು ಪೂರೈಕೆಯಲ್ಲಿ ಸ್ಥಗಿತ ಉಂಟಾಗಲಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry