ಚಳಿ: ಇಬ್ಬರ ಸಾವು

7

ಚಳಿ: ಇಬ್ಬರ ಸಾವು

Published:
Updated:

ನವದೆಹಲಿ (ಪಿಟಿಐ): ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಿಮಪಾತವಾಗುತ್ತಿದ್ದು, ಮರಗಟ್ಟುವ ಚಳಿಯಿಂದಾಗಿ ಜಮ್ಮು ನಗರದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.ಸಾವಿಗೀಡಾದವರಲ್ಲಿ ಒಬ್ಬ ಸಾಧು, ಮತ್ತೊಬ್ಬ ಭಿಕ್ಷುಕ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರದ ಸೇರಿದಂತೆ ಕಾಶ್ಮೀರ ಕಣಿವೆಯ ಬಹುತೇಕ ಪ್ರದೇಶದಲ್ಲಿ ಹಿಮಪಾತವಾಗುತ್ತಿದ್ದು, ಶುಕ್ರವಾರ 294 ಕಿ.ಮೀ. ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಲ್ಲಿಸಲಾಗಿತ್ತು.ಗುರುವಾರ ರಾತ್ರಿಯಿಂದ ಸುರಿದ ಹಿಮದಿಂದಾಗಿ ಇಡೀ ಕಣಿವೆಯು ಶ್ವೇತ ವಸ್ತ್ರ ಹೊದ್ದಂತೆ ಭಾಸವಾಯಿತು.ಉತ್ತರಾಖಂಡದ ಮುಸ್ಸೂರಿ, ಗಡವಾಲ್, ಚಮೋಲಿ, ಪಿತೋರ್‌ಗಡ ಮತ್ತಿತರ ಪ್ರದೇಶಗಳೂ ತೀವ್ರ ಚಳಿಗೆ ಸಿಲುಕಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry