ಮಂಗಳವಾರ, ಮಾರ್ಚ್ 9, 2021
23 °C
ಮಕ್ಕಳ ಪದ್ಯ

ಚಳಿ ಮತ್ತು ಸೋಂಟ ಇಲಿ

ವಿಜಯಶ್ರೀ ಹಾಲಾಡಿ Updated:

ಅಕ್ಷರ ಗಾತ್ರ : | |

ಚಳಿ ಮತ್ತು ಸೋಂಟ ಇಲಿ

ಬೆಳ್ಳಿ ಬೆಕ್ಕು

ಸ್ವೆಟರು ಹಾಕಿ

ಮಫ್ಲರ್ ಕೂಡ ಕಟ್ಟಿತ್ತು

ಜರ್ಕಿನ್ ತೊಟ್ಟು

ಸಾಕ್ಸು ಧರಿಸಿ

ಚಳಿ ಚಳಿ ಅಂತಾ ನಡಿತಿತ್ತು!

ಗೀಜುಗ ಹಕ್ಕಿ

ಗರಿಯ ಮುಚ್ಚಿ

ಕಬ್ಬಿನ ಜುಂಗು ಹೊದ್ದಿತ್ತು

ಸೂರ್ಯ ಮಾಮಗೆ

ಟಾ ಟಾ ಮಾಡಿ

ಗೂಡಿನ ಒಳಗೆ ಮುದುರಿತ್ತು!

ಟಾಮಿ ನಾಯಿ

ಮೂಳೆ ಕಡಿದು

ಬಿಸಿ ಬಿಸಿ ಕಾಫಿ ಕುಡಿದಿತ್ತು

ಕಣ್ಣಿಗೆ ಗ್ಲಾಸು

ಕಂಬಳಿ ಮುಸುಕು

ಸುರುಳಿ ಸುತ್ತಿ ಕುಳಿತಿತ್ತು!

ಅಳಿಲು ಮಾಮಿ

ಮರಿಯನು ಅಪ್ಪಿ

ಪೊಟರೆಯ ಆಳದಿ ಮಲಗಿತ್ತು

ಹಗಲೋ ಇರುಳೋ

ಪರಿವೇ ಇಲ್ಲದೇ

ತಿಂಗಳು ಉರುಳಿಯೇ ಹೋಗಿತ್ತು!

ಹಿಮದ ಕರಡಿ

ಹಿಮವ ಕೊಡಹಿ

ಬೆಂಕಿ ಕ್ಯಾಂಪು ಮಾಡಿತ್ತು

ಕಟ್ಟಿಗೆ ಒಟ್ಟಿ

ಚಳಿಯ ಕಾಸಿ

ಹಬೆಹಬೆ ಟೀಯ ಹೀರ್ತಿತ್ತು!ಸೋಂಟ ಇಲಿಯು

ಬಿಲವ ಕೊರೆದು

‘ಹೀಟರ್’ ಹಾಕಿಯೇ ಬಿಟ್ಟಿತ್ತು!ಪೇಪರ್ ಓದುತ

ಕುರುಕು ಮೆಲ್ಲುತ

ಆರಾಮ್ ಕುರ್ಚಿಗೆ

ಒರಗಿತ್ತು!

ಆರಾಮ್ ಕುರ್ಚಿಗೆ ಒರಗಿತ್ತು!ಈಯ ಈಯ ವೋ

ಬೆಕ್ಕು ಅಂದ್ರೆ ನಾನೇ ಕರಿಯ!

ಬೆಕ್ಕು ಅಂದ್ರೆ ನಾನೇ

ಕರಿಯ ಈಯ ಈಯ ವೋ

ಕೊಬ್ಬು ಬಂದ್ರೆ ನಂದೇನ್

ತಪ್ಪಾ? ಈಯ ಈಯ ವೋ

ದಕ್ಷಿಣ ಕನ್ನಡ ಕಿಟ್ಟಿ-

ಕರಿಯ ಈಯ ಈಯ ವೋ

ಇವ್ನೇ ಬೆಕ್ಕು ಸ್ಟೇಟಿಗೆ

ಎಲ್ಲಾ ಈಯ ಈಯ ವೋ

ಕಪ್ಪೆ ಮೀನು ಜಿರಳೆ

ಇಷ್ಟ ಈಯ ಈಯ ವೋ

ದಿನವೂ ನಾಲ್ಕು ಇಲಿಗಳ

ತಿನ್ನುವೆ ಈಯ ಈಯ ವೋ

ಕೆಂಚ ಮೋಳ, ಟಾಮಿಯೇ

ಬರ್ಲಿ ಈಯ ಈಯ ವೋ

ಕುಸ್ತಿ ಮಸ್ತಿ ದರ್ಬಾರ್

ನಂದೇ ಈಯ ಈಯ ವೋ

ಗೆಳೆಯರ ಗೆಳೆಯ ಕರಿಯ

ನಾನೇ ಈಯ ಈಯ ವೋ

ಮರಿಬೆಕ್ಕುಗಳ ರಕ್ಷಣೆ

ನಂದೇ ಈಯ ಈಯ ವೋ

ಸಿಟ್ಟಿನ ಕಿಟ್ಟಿ ಅಂತೆಲ್ಲ

ಕರೆದ್ರೆ ಈಯ ಈಯ ವೋ

ಹೆದರೋನಲ್ಲ ಸುದ್ದಿ

ಮಾಡ್ಲಿ ಈಯ ಈಯ ವೋ

ಒಳ್ಳೆ ಬೆಕ್ಕು ನಾನಂತ-

ಗೊತ್ತು ಈಯ ಈಯ ವೋ

ಲೋಕ ಮೆಚ್ಚಿ ಆಗೋದ್-

ಏನಿದೆ ಈಯ ಈಯ ವೋ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.