ಚಳ್ಳಕೆರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆಯಾಗಿ ಬೋರಮ್ಮ

7

ಚಳ್ಳಕೆರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆಯಾಗಿ ಬೋರಮ್ಮ

Published:
Updated:

ಚಳ್ಳಕೆರೆ: ಇಲ್ಲಿನ ತಾ.ಪಂ.ಗೆ  ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ನಾಯಕನಹಟ್ಟಿ ಕ್ಷೇತ್ರದ ಬೋರಮ್ಮ ಹಾಗೂ ಬಿಜೆಪಿಯಿಂದ ಮೀರಾಸಾಬಿಹಳ್ಳಿ ಕ್ಷೇತ್ರದ ಲತಾಭರತೇಶರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು,ಜೆಡಿಎಸ್‌ನಿಂದ ದೇವರಮರಿಕುಂಟೆ ಕ್ಷೇತ್ರದ ಎಂ.ಒ. ಮಂಜುನಾಥ ಹಾಗೂ ಬಿಜೆಪಿಯಿಂದ ಚಿತ್ರ ನಾಯಕಹಳ್ಳಿ ಕ್ಷೇತ್ರದ ಸಿ.ಟಿ. ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು. ನಿರೀಕ್ಷೆಯಂತೆ ನಾಯಕನಹಟ್ಟಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಬೋರಮ್ಮ ಅಧ್ಯಕ್ಷರಾಗಿ, ದೇವರಮರಿಕುಂಟೆ ಕ್ಷೇತ್ರದ ಜೆಡಿಎಸ್ ಸದಸ್ಯ ಎಂ.ಒ. ಮಂಜುನಾಥ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry