ಚವಾಣ್ ವಿರುದ್ಧ ಅಜಿತ್ ಟೀಕೆ

7

ಚವಾಣ್ ವಿರುದ್ಧ ಅಜಿತ್ ಟೀಕೆ

Published:
Updated:

ಮುಂಬೈ (ಪಿಟಿಐ): ಕಡತಗಳ ವಿಲೇವಾರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ಅವರು ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಇತ್ತೀಚೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಟೀಕಿಸಿದ್ದಾರೆ.ಸತಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, `ಕೆಲವು ಮಂದಿ ಕಡತಗಳನ್ನು ವಿಲೇವಾರಿ ಮಾಡದೆ ಹಾಗೆಯೇ ಇಟ್ಟುಕೊಳ್ಳುತ್ತಾರೆ. ಕಾರಣ ಏನೆಂದು ನನಗೆ ಗೊತ್ತಿಲ್ಲ. ಬಹುಶಃ ಕಡತಗಳ ಅಧ್ಯಯನ ನಡೆಸಲು ಇರಬಹುದು. ಆ ಕುರಿತು ನಾನು ಟೀಕಿಸಲಾರೆ~ ಎಂದು ಪವಾರ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry