ಶನಿವಾರ, ಜೂನ್ 19, 2021
24 °C

ಚವ್ಹಾಟಾ ಜಾತ್ರೆಯಲ್ಲಿ ಪ್ರಾಣಿಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ಪಟ್ಟಣದ ನಿಂಗಾಪುರಗಲ್ಲಿಯಲ್ಲಿ ಮಂಗಳವಾರ ತಡರಾತ್ರಿ ಜರುಗಿದ ಚವ್ಹಾಟಾ ದೇವರ ಜಾತ್ರೆಯಲ್ಲಿ ಹರಕೆಯ ನೆಪದಲ್ಲಿ ಸಾರ್ವಜನಿಕವಾಗಿ ನೂರಾರು ಮೂಕಪ್ರಾಣಿಗಳ ಬಲಿ ನಡೆದಿದೆ.ಪ್ರಾಣಿಬಲಿಯ ಬಗ್ಗೆ ಮುಂಚೆಯೇ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಮೌನ ಹಲವು ಅನುಮಾನಗಳಿಗೆ ಎಡೆಮಾಡಿದೆ.ಪ್ರತಿವರ್ಷ ರಂಗಪಂಚಮಿಯ ಮರುದಿನ ಜರುಗುವ ಈ ಜಾತ್ರೆಯಲ್ಲಿ ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನ ಆಗಮಿಸಿ ಚವ್ಹಾಟಾ ದೇವರ ದರ್ಶನ ಪಡೆಯುವುದು ಮೊದಲಿನಿಂದಲೂ ರೂಢಿಯಲ್ಲಿದೆ.ಆದರೆ ಈ ಭಾಗದ ಕೆಲವರು ದೇವರಿಗೆ ಹರಕೆಯ ಹೆಸರಿನಲ್ಲಿ ದೇವರನ್ನು ಪ್ರತಿಷ್ಠಾಪಿಸಿದ ವೇದಿಕೆಯ ಮುಂಭಾಗದಲ್ಲಿ ನೂರಾರು ಕುರಿ, ಹುಂಜ ಹಾಗೂ ಆಡುಗಳ ಬಲಿಯನ್ನು ನೀಡುತ್ತಾರೆ. ಈ ಮೂಕಪ್ರಾಣಿಗಳ ರುಂಡಗಳನ್ನು ವೇದಿಕೆಯ ಮುಂದೆ ರಾಶಿಮಾಡಿ ಮುಂಡವನ್ನು ಮಾತ್ರ ಮನೆಗೆ ತೆಗೆದುಕೊಂಡು ಬಾಡೂಟ ತಯಾರಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.