ಚಹಾ ಆಮದು ಕುಸಿತ

ಭಾನುವಾರ, ಮೇ 26, 2019
27 °C

ಚಹಾ ಆಮದು ಕುಸಿತ

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ ದೇಶದ ಚಹಾ ಆಮದು ಶೇ 22ರಷ್ಟು ಕುಸಿದಿದ್ದು, 5.19 ದಶಲಕ್ಷ ಕೆ.ಜಿಗಳಷ್ಟಾಗಿದೆ ಎಂದು ಚಹಾ ಮಂಡಳಿ ಹೇಳಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ 6.62 ದಶಲಕ್ಷ ಕೆ.ಜಿಗಳಷ್ಟು ಚಹಾ ಆಮದು ಮಾಡಿಕೊಳ್ಳಲಾಗಿತ್ತು.ಭಾರತವು, ಪ್ರಪಂಚದಲ್ಲಿಯೇ ಅತಿ ದೊಡ್ಡ ಚಹಾ ಗ್ರಾಹಕ ದೇಶವಾಗಿದೆ. ಏಪ್ರಿಲ್ ಜುಲೈ ಅವಧಿಯಲ್ಲಿ ಚಹಾ ಮರು-ರಫ್ತು ಪ್ರಮಾಣ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಆಮದು ಪ್ರಮಾಣವೂ ಕುಸಿತ ಕಂಡಿದೆ.ಪ್ರಸಕ್ತ ಹಣಕಾಸು ವರ್ಷದ ಜನವರಿ-ಜುಲೈ ಅವಧಿಯಲ್ಲಿ ಚಹಾ ಆಮದು ಶೇ 19ರಷ್ಟು ಕುಸಿದಿದ್ದು, 9.42 ದಶಲಕ್ಷ ಕೆ.ಜಿಗಳಷ್ಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry