ಚಾಂಪಿಯನ್ಸ್‌ ಲೀಗ್‌: ಪಾಕ್‌ ತಂಡಕ್ಕೆ ವೀಸಾ

7

ಚಾಂಪಿಯನ್ಸ್‌ ಲೀಗ್‌: ಪಾಕ್‌ ತಂಡಕ್ಕೆ ವೀಸಾ

Published:
Updated:

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ದೇಸಿ ಟ್ವೆಂಟಿ–20 ಚಾಂಪಿಯನ್‌ ತಂಡ ಫೈಸಲಾಬಾದ್‌ ವೂಲ್ವ್ಸ್‌ಗೆ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಅವಕಾಶ ಲಭಿಸಿದೆ.ಫೈಸಲಾಬಾದ್‌ನ ತಂಡ ಸೆಪ್ಟೆಂಬರ್‌ 17 ರಿಂದ ಆರಂಭವಾಗಲಿರುವ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಲಿದೆ. ಈ ತಂಡದ ಆಟಗಾರರಿಗೆ ವೀಸಾ ನೀಡಲು ಭಾರತ ನಿರಾಕರಿಸಿತ್ತು. ಆದ್ದರಿಂದ ತಂಡ ಭಾರತಕ್ಕೆ ಬರುವುದು ಅನುಮಾನ ಎನಿಸಿತ್ತು.ಇದೀಗ ಭಾರತ ಸರ್ಕಾರ ವೀಸಾ ನೀಡಲು ಒಪ್ಪಿರುವ ಕಾರಣ ಮಿಸ್ಬಾ ಉಲ್‌ ಹಕ್‌ ನೇತೃತ್ವದ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ‘ಎಲ್ಲ ಆಟಗಾರರಿಗೆ ಈಗಾಗಲೇ ವೀಸಾ ನೀಡಲಾಗಿದೆ’ ಎಂದು ಅಧಿಕೃತ ಮೂಲ ತಿಳಿಸಿದೆ.ಪಾಕ್‌ನಿಂದ ಆಗಮಿಸುವ ತಂಡದ ಆಟಗಾರರಿಗೆ ಭದ್ರತೆ ನೀಡುವುದು ಕಷ್ಟ ಎಂಬ ಕಾರಣ ಭಾರತ ವೀಸಾ ನೀಡಲು ಮೊದಲು ನಿರಾಕರಿಸಿತ್ತು. ಫೈಸಲಾಬಾದ್‌ ತಂಡ ತನ್ನ ಮೂರು ಅರ್ಹತಾ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry