ಚಾಂಪಿಯನ್ಸ್ ಟ್ರೋಫಿ: ಆಸ್ಟ್ರೇಲಿಯಾಕ್ಕೆ ಪ್ರಶಸ್ತಿ

7
ಪಾಕ್ ಎದುರು ಭಾರತ ಪರಾಭವ

ಚಾಂಪಿಯನ್ಸ್ ಟ್ರೋಫಿ: ಆಸ್ಟ್ರೇಲಿಯಾಕ್ಕೆ ಪ್ರಶಸ್ತಿ

Published:
Updated:ಮೆಲ್ಬರ್ನ್ (ಪಿಟಿಐ): ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಿಂದ ಮತ್ತೊಮ್ಮೆ ಬರಿಗೈಯಲ್ಲಿ ಮರಳಿದೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಸೋಲು ಅನುಭವಿಸಿತು.ಭಾನುವಾರ ನಡೆದ ಪಂದ್ಯದಲ್ಲಿ ಪಾಕ್ 3-2 ಗೋಲುಗಳ ರೋಚಕ ಗೆಲುವು ಪಡೆದು ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು. ಪಾಕ್ ತಂಡಕ್ಕೆ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಚಾಂಪಿಯನ್ಸ್ ಟ್ರೋಫಿ  ಟೂರ್ನಿಯಲ್ಲಿ ಲಭಿಸಿದ ಮೊದಲ ಪದಕ ಇದಾಗಿದೆ.2002, 2003 ಮತ್ತು 2004 ರ ಟೂರ್ನಿಗಳಲ್ಲೂ ಕಂಚಿನ ಪದಕಕ್ಕಾಗಿ ಇವೆರಡು ತಂಡಗಳು ಪೈಪೋಟಿ ನಡೆಸಿದ್ದವು. ಮೂರು ಬಾರಿಯೂ ಪಾಕಿಸ್ತಾನಕ್ಕೆ ಗೆಲುವು ಲಭಿಸಿತ್ತು. ಈ ಬಾರಿ ಭಾರತಕ್ಕೆ ಮುಯ್ಯಿ ತೀರಿಸುವ ಅವಕಾಶ ಲಭಿಸಿತ್ತು. ಆದರೆ ಅದರಲ್ಲಿ ವಿಫಲವಾಗಿದೆ.ರಿಜ್ವಾನ್ (22ನೇ ನಿಮಿಷ), ಶಫ್ಕತ್ ರಸೂಲ್ (41) ಹಾಗೂ ಮುಹಮ್ಮದ್ ಅತೀಕ್ (66) ಅವರ ಗೋಲುಗಳ ನೆರವಿನಿಂದ ಪಾಕ್ ತಂಡ ಗೆಲುವನ್ನು ಖಚಿತಪಡಿಸಿಕೊಂಡಿತು.ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕೆಂಡ್‌ಗಳಿರುವಾಗ ರೂಪಿಂದರ್ ಪಾಲ್ ಸಿಂಗ್ (70) ಚೆಂಡನ್ನು ಗುರಿ ಸೇರಿಸಿ ಭಾರತದ ಸೋಲಿನ ಅಂತರವನ್ನು ತಗ್ಗಿಸಿದರು.

ಆಸ್ಟ್ರೇಲಿಯಾಕ್ಕೆ ಪ್ರಶಸ್ತಿ: ಫೈನಲ್‌ನಲ್ಲಿ ಹಾಲೆಂಡ್ ತಂಡವನ್ನು 2-1 ರಲ್ಲಿ ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿತು. ಮಾತ್ರವಲ್ಲ ಸತತ ಐದನೇ ಬಾರಿ ಟ್ರೋಫಿ ಜಯಿಸಿದ ಹಿರಿಮೆಗೆ ಪಾತ್ರವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry