ಮಂಗಳವಾರ, ಮೇ 18, 2021
22 °C

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಮೇಲೆ ಐಸಿಸಿ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ವಾಸನೆ ಸುಳಿದಾಡಿದ ಕಾರಣ ಎಚ್ಚರಗೊಂಡಿರುವ  ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮೇಲೆ ಹದ್ದಿನ ಕಣ್ಣಿಟ್ಟಿದೆ.ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದ ಐಪಿಎಲ್ ಮತ್ತು ಬಾಂಗ್ಲಾದೇಶ ಪ್ರೀವಿುಯರ್ ಲೀಗ್‌ನಲ್ಲಿ ನಡೆದ (ಬಿಪಿಎಲ್) ಕಳ್ಳಾಟ ನಿಯಂತ್ರಿಸಲು ಐಸಿಸಿ ಹಲವು ಯೋಜನೆಗಳನ್ನು ರೂಪಿಸಿದೆ. `ಅಟಗಾರರು ಪಂದ್ಯವನ್ನಾಡಲು ತೆರಳುವ ಮುನ್ನ ಮೊಬೈಲ್ ಅನ್ನು ಒಪ್ಪಿಸಬೇಕು.ಆಟಗಾರರ ಚಲನವಲನಗಳ ಬಗ್ಗೆಯೂ ಐಸಿಸಿ ಭ್ರಷ್ಟಾಚಾರ ತಡೆ ಘಟಕ ಮತ್ತು ಭದ್ರತಾ ಘಟಕ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ.

ಸಹಾಯಕ ಸಿಬ್ಬಂದಿ ಸೇರಿದಂತೆ ಎಂಟು ಸದಸ್ಯರನ್ನೊಳಗೊಂಡ ಅರು ತಂಡಗಳು ಕಳ್ಳಾಟ ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಕಳ್ಳಾಟದ ಅಪಾಯಗಳ ಬಗ್ಗೆಯೂ ಅಧಿಕಾರಿಗಳು ತಿಳಿಸಿಕೊಡಲಿದ್ದಾರೆ. ಬುಧವಾರ ನಡೆದ ಅಭ್ಯಾಸ ಪಂದ್ಯದ ನಂತರ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರಿಗೆ ಎಸಿಎಸ್‌ಯು ಅಧಿಕಾರಿಗಳು ಈ ಬಗ್ಗೆ ಹೇಳಿಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.