ಶುಕ್ರವಾರ, ಮೇ 7, 2021
20 °C

ಚಾಂಪಿಯನ್ಸ್ ಟ್ರೋಫಿ ಹಾಕಿ ನ್ಯೂಜಿಲೆಂಡ್ ಆತಿಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೂಸಾನ್, ಸ್ವಿಟ್ಜರ್‌ಲೆಂಡ್ (ಪಿಟಿಐ): ಭಾರತಕ್ಕೆ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಆತಿಥ್ಯ ವಹಿಸುವ ಅವಕಾಶ ನ್ಯೂಜಿಲೆಂಡ್‌ಗೆ ಲಭಿಸಿದೆ. ಈ ಟೂರ್ನಿ ಡಿಸೆಂಬರ್ 3 ರಿಂದ 11ರ ವರೆಗೆ ಆಕ್ಲೆಂಡ್‌ನಲ್ಲಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಮಂಗಳವಾರ ಪ್ರಕಟಿಸಿದೆ.`ವಿಶ್ವ ರ‌್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತಕ್ಕೆ ಬದಲಾಗಿ ಆಡಲಿದೆ. ನವೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚಾಂಪಿಯನ್ಸ್ ಚಾಲೆಂಜ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಅವಕಾಶ ನೀಡಲಾಗಿದೆ~ ಎಂದು ಎಫ್‌ಐಎಚ್ ತಿಳಿಸಿದೆ.ಈ ಮೊದಲು ಆತಿಥೇಯರು ಎಂಬ ಕಾರಣ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ನೇರ ಅರ್ಹತೆ ಗಿಟ್ಟಿಸಿತ್ತು. ಈಗ ಅದು ತಪ್ಪಿಹೋಗಿದೆ. ಇದೀಗ ಚಾಂಪಿಯನ್ಸ್ ಚಾಲೆಂಜ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಭಾರತಕ್ಕೆ ಆಕ್ಲೆಂಡ್‌ನಲ್ಲಿ ನಡೆಯುವ ಟೂರ್ನಿಗೆ ಅರ್ಹತೆ ಪಡೆಯಲು ಸಾಧ್ಯ.ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯದ ಹಕ್ಕನ್ನು ಈ ಮೊದಲು ಭಾರತಕ್ಕೆ ನೀಡಲಾಗಿತ್ತು. ಆದರೆ ಹಾಕಿ ಇಂಡಿಯಾ (ಎಚ್‌ಐ) ಮತ್ತು ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ನಡುವಿನ ಕಚ್ಚಾಟದಿಂದಾಗಿ ಎಫ್‌ಐಎಚ್ ಈ ಅವಕಾಶವನ್ನು ಹಿಂದಕ್ಕೆ ಪಡೆದುಕೊಂಡಿತ್ತು.

`ಒಂದು ಟೂರ್ನಿಯನ್ನು ಯಾವುದೇ ಒಂದು ದೇಶದಿಂದ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳುವುದು ಅಷ್ಟು ಸುಲಭವಲ್ಲ~ ಎಂದು ಎಫ್‌ಐಎಚ್ ಅಧ್ಯಕ್ಷ ಲಿಯೊನಾಡ್ರೊ ನೆರ್ಗೆ ಹೇಳಿದರು.

 ಆದರೆ ನ್ಯೂಜಿಲೆಂಡ್ ಈ ಟೂರ್ನಿಯನ್ನು ಯಶಸ್ವಿಯಾಗಿ ನಡೆಸುವ ವಿಶ್ವಾಸವಿದೆ~ ಎಂದು ನೆಗ್ರೆ ತಿಳಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪೂರ್ಣ ವೇಳಾಪಟ್ಟಿಯನ್ನು ಎಫ್‌ಐಎಚ್ ಸದ್ಯದಲ್ಲೇ ಪ್ರಕಟಿಸಲಿದೆ. ಆದರೆ ಟೂರ್ನಿ ಡಿ. 3 ರಿಂದ 11ರ ವರೆಗೆ ನಡೆಯುವುದು ಖಚಿತ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.