ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ: ಪ್ರಧಾನ ಹಂತಕ್ಕೆ ಆಕ್ಲೆಂಡ್ ತಂಡ

7

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ: ಪ್ರಧಾನ ಹಂತಕ್ಕೆ ಆಕ್ಲೆಂಡ್ ತಂಡ

Published:
Updated:

ಸೆಂಚೂರಿಯನ್ (ಪಿಟಿಐ): ಅಜರ್ ಮೊಹಮ್ಮೂದ್ ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಆಕ್ಲೆಂಡ್ ಏಸಸ್ ತಂಡದವರು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ರಧಾನ ಹಂತದಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ.ಸೂಪರ್‌ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಆಕ್ಲೆಂಡ್ ಎಂಟು ವಿಕೆಟ್‌ಗಳಿಂದ ಹ್ಯಾಂಪ್‌ಷೈರ್ ತಂಡವನ್ನು ಪರಾಭವಗೊಳಿಸಿತು. ಹ್ಯಾಂಪ್‌ಷೈರ್ ನೀಡಿದ 122 ರನ್‌ಗಳ ಗುರಿಯನ್ನು ಆಕ್ಲೆಂಡ್ 14.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ತಲುಪಿತು. ಇದು ಈ ತಂಡಕ್ಕೆ ಲಭಿಸಿದ ಎರಡನೇ ಗೆಲುವು.ಮೊದಲು ಬೌಲಿಂಗ್‌ನಲ್ಲಿ ಐದು ವಿಕೆಟ್ ಕಬಳಿಸಿದ್ದ ಮೊಹಮ್ಮೂದ್ ಬಳಿಕ ಬ್ಯಾಟಿಂಗ್‌ನಲ್ಲಿ 31 ಎಸೆತಗಳಲ್ಲಿ 55 ರನ್ ಗಳಿಸಿದರು. ಇದರಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿದ್ದವು.

ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಆಕ್ಲೆಂಡ್ ಆರು ವಿಕೆಟ್‌ಗಳಿಂದ ಸಿಯಾಲ್‌ಕೋಟ್  ಸ್ಟಾಲಿಯನ್ಸ್ ತಂಡವನ್ನು ಮಣಿಸಿದ್ದರು.ಸಂಕ್ಷಿಪ್ತ ಸ್ಕೋರ್: ಹ್ಯಾಂಪ್‌ಷೈರ್: 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 121 (ಮೈಕೆಲ್ ಕಾರ್ಬೆರಿ 65, ಸೀನ್ ಎರ್ವಿನ್ 16; ಅಜರ್ ಮೊಹಮ್ಮೂದ್ 24ಕ್ಕೆ5, ರೋನಿ ಹೀರಾ 25ಕ್ಕೆ2); ಆಕ್ಲೆಂಡ್ ಏಸಸ್: 14.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 123 (ಮಾರ್ಟಿನ್ ಗುಪ್ಟಿಲ್ 38, ಅಜರ್ ಮೊಹಮ್ಮೂದ್ ಔಟಾಗದೆ 55; ಶಾಹೀದ್ ಅಫ್ರಿದಿ 23ಕ್ಕೆ1). ಫಲಿತಾಂಶ: ಆಕ್ಲೆಂಡ್ ಏಸಸ್‌ಗೆ ಎಂಟು ವಿಕೆಟ್ ಜಯ. ಪಂದ್ಯ ಶ್ರೇಷ್ಠ: ಅಜರ್ ಮೊಹಮ್ಮದ್. ಮೊದಲ ಪಂದ್ಯದ ಫಲಿತಾಂಶ: ಸಿಯಾಲ್‌ಕೋಟ್ ಸ್ಟಾಲಿಯನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 130 (ಶಾಹೀದ್ ಯೂಸುಫ್ 39, ಅಲಿ ಖಾನ್ 19; ಕೈಲ್ ಮಿಲ್ಸ್ 6ಕ್ಕೆ2, ಆ್ಯಂಡ್ರೆ   ಆ್ಯಡಮ್ಸ 21ಕ್ಕೆ2); ಆಕ್ಲೆಂಡ್: 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 136 (ಮಾರ್ಟಿನ್ ಗುಪ್ಟಿಲ್ 40, ಅನರು ಕಿಚನ್ ಔಟಾಗದೆ 33; ಸರ್ಫ್‌ರಾಜ್ ಅಹ್ಮದ್ 31ಕ್ಕೆ2). ಫಲಿತಾಂಶ: ಆಕ್ಲೆಂಡ್‌ಗೆ 6 ವಿಕೆಟ್ ಜಯ. ಪಂದ್ಯ ಶ್ರೇಷ್ಠ: ಕೈಲ್ ಮಿಲ್ಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry