ಚಾಂಪಿಯನ್ಸ್ ಲೀಗ್: ಸಿಡ್ನಿ ಗೆಲುವಿಗೆ ಬಲ ತುಂಬಿದ ಹೆನ್ರಿಕ್ಸ್

7

ಚಾಂಪಿಯನ್ಸ್ ಲೀಗ್: ಸಿಡ್ನಿ ಗೆಲುವಿಗೆ ಬಲ ತುಂಬಿದ ಹೆನ್ರಿಕ್ಸ್

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಾಫ್ ಡು ಪ್ಲೆಸಿಸ್ ಹಾಗೂ ಸುರೇಶ್ ರೈನಾ ತಂಡವನ್ನು ಗೆಲುವಿನ ದಡ ಸೇರಿಸಲು ಭಾರೀ ಹೋರಾಟ ನಡೆಸಿದರು. ಆದರೆ, ಸಿಡ್ನಿ ಸಿಕ್ಸರ್ ತಂಡದ ಮೊಯ್ಸಸ್ ಹೆನ್ರಿಕ್ಸ್ ಅವರು ಆಲ್‌ರೌಂಡ್ ಪ್ರದರ್ಶನ ನೀಡಿ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ ಅಡ್ಡಿಯಾದರು. ಪರಿಣಾಮ ಆಸ್ಟ್ರೇಲಿಯಾದ ಸಿಡ್ನಿ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ 14 ರನ್‌ಗಳ ಗೆಲುವು ಸಾಧಿಸಿತು.ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತ್ತು. ಈ ಸವಾಲಿಗೆ ಉತ್ತರ ನೀಡಲು ಮುಂದಾದ ದೋನಿ ಪಡೆಗೆ ಹೆನ್ರಿಕ್ಸ್  (23ಕ್ಕೆ3) ತಡೆಗೋಡೆಯಾದರು. ಇದರಿಂದ ದೋನಿ ನೇತೃತ್ವದ ಸೂಪರ್ ಕಿಂಗ್ಸ್ ತಂಡಕ್ಕೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 171 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಸೂಪರ್ ಕಿಂಗ್ಸ್ ಆರಂಭದಲ್ಲಿಯೇ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಪ್ಲೆಸಿಸ್ (43, 25ಎಸೆತ, 5ಬೌಂಡರಿ, 2 ಸಿಕ್ಸರ್) ಹಾಗೂ ರೈನಾ (57, 33ಎಸೆತ, 8ಬೌಂಡರಿ, 2 ಸಿಕ್ಸರ್) ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಮಿಷೆಲ್ ಸ್ಟ್ರಾಕ್ (31ಕ್ಕೆ3) ಕೂಡಾ ಸಿಡ್ನಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ತಂಡದ ಶೇನ್ ವಾಟ್ಸನ್ (46, 30ಎಸೆತ, 5ಬೌಂಡರಿ, 2ಸಿಕ್ಸರ್) ಹಾಗೂ 23 ಎಸೆತಗಳಲ್ಲಿ 49 ರನ್ ಕಲೆ ಹಾಕಿದ ಹೆನ್ರಿಕ್ಸ್ ಅವರ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತವನ್ನು ಸೂಪರ್ ಕಿಂಗ್ಸ್ ಎದುರು ಇಟ್ಟಿತ್ತು.

ಸ್ಕೋರ್ ವಿವರ:

ಸಿಡ್ನಿ ಸಿಕ್ಸರ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185

ಮೈಕಲ್ ಲುಂಬ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ  18

ಶೇನ್ ವಾಟ್ಸನ್ ರನ್ ಔಟ್ (ಬೆನ್ ಹಿಲ್ಫೆನಾಸ್)  46

ನಿಕ್ ಮ್ಯಾಡಿನ್‌ಸನ್ ಬಿ ಆರ್. ಅಶ್ವಿನ್  12

ಬ್ರಾಡ್ ಹಡಿನ್ ಸಿ ಬೆನ್ ಹಿಲ್ಫೆನಾಸ್ ಬಿ ಆರ್. ಅಶ್ವಿನ್  20

ಸ್ಟೀವನ್ ಸ್ಮಿತ್ ಸಿ ಮುರಳಿ ವಿಜಯ್ ಬಿ ಬೆನ್ ಹಿಲ್ಫೆನಾಸ್  26

ಮೊಯ್ಸಸ್ ಹೆನ್ರಿಕ್ಸ್ ಔಟಾಗದೆ  49

ಇತರೆ: (ಲೆಗ್ ಬೈ-6, ವೈಡ್-8)  14

ಬೌಲಿಂಗ್: ಬೆನ್ ಹಿಲ್ಫೆನಾಸ್ 3-0-26-1, ಡಗ್ ಬೌಲಿಂಜರ್ 4-0-39-0, ವಿಜಯ್ ಕುಮಾರ್ ಮಹೇಶ್ 1-0-18-0, ರವೀಂದ್ರ ಜಡೇಜ 4-0-29-1, ಆರ್. ಅಶ್ವಿನ್ 4-0-32-2, ಫ್ಲಾಫ್ ಡು ಪ್ಲೆಸಿಸ್ 4-0-35-0.

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 171

ಮೈಕ್ ಹಸ್ಸಿ ಸಿ ಲುಂಬ್ ಬಿ ಸ್ಟೀವ್ ಓಕೊಫೆ  16

ಮುರಳಿ ವಿಜಯ್ ಬಿ ಮೈಕಲ್ ಸ್ಟ್ರಾಕ್  01

ಫ್ಲಾಫ್ ಡು ಪ್ಲೆಸಿಸ್  ಸಿ ಮೈಕಲ್ ಸ್ಟ್ರಾಕ್ ಬಿ ಪ್ಯಾಟ್ ಕಮಿನ್ಸ್  43

ಸುರೇಶ್ ರೈನಾ ಸಿ ಸ್ಮಿತ್ ಬಿ ಹೆನ್ರಿಕ್ಸ್   57

ಎಸ್. ಬದರೀನಾಥ್ ಸಿ ಹಡಿನ್ ಬಿ ಹೆನ್ರಿಕ್ಸ್  06

ಮಹೇಂದ್ರ ಸಿಂಗ್ ದೋನಿ ಸಿ ಹಾಜ್ಲೆವುಡ್ ಬಿ ಹೆನ್ರಿಕ್ಸ್  08

ರವೀಂದ್ರ ಜಡೇಜ ಸಿ ರೊಹ್ರೆರಾ ಬಿ ವ್ಯಾಟ್ಸನ್  02

ಆರ್. ಅಶ್ವಿನ್ ಸಿ ಸ್ಮಿತ್ ಬಿ ಸ್ಟ್ರಾಕ್ 1 8

ಬೆನ್ ಹಿಲ್ಫೆನಾಸ್ ಔಟಾಗದೆ  07

ವಿಜಯ್ ಕುಮಾರ್ ಮಹೇಶ್  ಸಿ ಲುಂಬ್ ಬಿ ಸ್ಟ್ರಾಕ್  02

ಇತರೆ: (ಲೆಗ್ ಬೈ-3, ವೈಡ್-8)  11

ಬೌಲಿಂಗ್: ಜೋಷ್ ಹಾಜ್ಲೆವುಡ್ 4-0-25-0, ಮಿಷೆಲ್ ಸ್ಟ್ರಾಕ್ 4-0-31-3, ಪ್ಯಾಟ್ ಕಮಿನ್ಸ್ 4-0-42-1, ಶೇನ್ ವ್ಯಾಟ್ಸನ್ 3-0-31-1, ಸ್ಟೀವ್ ಓಕೊಫೆ 2-0-16-1, ಮೊಯ್ಸಸ್ ಹೆನ್ರಿಕ್ಸ್ 3-0-23-3.

ಫಲಿತಾಂಶ: ಸಿಡ್ನಿ ಸಿಕ್ಸರ್‌ಗೆ 14 ರನ್ ಜಯ. ಹಾಗೂ ನಾಲ್ಕು  ಪಾಯಿಂಟ್ಸ್. ಪಂದ್ಯ ಶ್ರೇಷ್ಠ: ಮೊಯ್ಸಸ್ ಹೆನ್ರಿಕ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry