ಚಾಂಪಿಯನ್ಸ್ ಲೀಗ್: ಸೆಮಿಫೈನಲ್‌ಗೆ ಲಯನ್ಸ್ ತಂಡ

7

ಚಾಂಪಿಯನ್ಸ್ ಲೀಗ್: ಸೆಮಿಫೈನಲ್‌ಗೆ ಲಯನ್ಸ್ ತಂಡ

Published:
Updated:

ಜೋಹಾನ್ಸ್‌ಬರ್ಗ್ (ಐಎಎನ್‌ಎಸ್): ಲಯನ್ಸ್ ತಂಡ ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಯಾರ್ಕ್‌ಷೈರ್ ಎದುರು ಐದು ವಿಕೆಟ್‌ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಯಾರ್ಕ್‌ಷೈರ್ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಲಯನ್ಸ್ ತಂಡ 19.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿ ಗೆಲುವಿನ ದಡ ಸೇರಿತು.`ಬಿ~ ಗುಂಪಿನಲ್ಲಿರುವ ಲಯನ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿ ಒಟ್ಟು 12 ಪಾಯಿಂಟ್ ಗಳಿಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಈ ಗುಂಪಿನ ಸಿಡ್ನಿ ಸಿಕ್ಸರ್ ಕೂಡಾ ನಾಲ್ಕರಘಟ್ಟಕ್ಕೆ ಲಗ್ಗೆ ಇಟ್ಟಿದೆ.ಸಂಕ್ಷಿಪ್ತ ಸ್ಕೋರು: ಯಾರ್ಕ್‌ಷೈರ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 131. (ಆ್ಯಂಡ್ರ್ಯೂ ಗಾಲೆ 21, ಪಿಲ್ ಜಾಕ್ವೆಸ್ 31, ಗ್ಯಾರಿ ಬ್ಯಾಲೆನ್ಸ್ 17; ಸೋಹಾಲಿ ತನ್ವೀರ್ 25ಕ್ಕೆ2, ಅಲ್ವಿರೊ ಪೀಟರ್ಸನ್ 11ಕ್ಕೆ1). ಲಯನ್ಸ್ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 134. ( ಅಲ್ವಿರೊ ಪೀಟರ್ಸನ್ 19, ಜೇನ್ ಶೇಮ್ಸ ಔಟಾಗದೆ 27; ಸ್ಟೀವನ್ ಪ್ಯಾಟರ್‌ಸನ್ 21ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry