ಚಾಂಪಿಯನ್ ಆಗಲೆಂದು ಹಾರೈಸೋಣ- ಪ್ರಜಾವಾಣಿ ಬಳಗದ ವಿಶೇಷ ಕಾರ್ಯಕ್ರಮ

7

ಚಾಂಪಿಯನ್ ಆಗಲೆಂದು ಹಾರೈಸೋಣ- ಪ್ರಜಾವಾಣಿ ಬಳಗದ ವಿಶೇಷ ಕಾರ್ಯಕ್ರಮ

Published:
Updated:

ಬೆಂಗಳೂರು: ವಿಶ್ವಕಪ್ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಸುದೀರ್ಘ ಕಾಲದ ನಿರಾಸೆಯನ್ನು ಮರೆಸಲು ಭಾರತ ತಂಡವು ಸಜ್ಜಾಗತೊಡಗಿದೆ. ಕ್ರಿಕೆಟ್ ಪ್ರೇಮಿಗಳ ಸಂಭ್ರಮವೂ ಹೆಚ್ಚಿದೆ. ‘ಮಹಿ’ ಪಡೆಯು ಚಾಂಪಿಯನ್ ಆಗಲೆಂದು ಹಾರೈಸಲು ಉತ್ಸಾಹದಿಂದ ಕಾಯ್ದಿರುವ ಅಭಿಮಾನಿಗಳಿಗೊಂದು ಅವಕಾಶವನ್ನು ಕಲ್ಪಿಸುತ್ತಿದೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ.ಫೆಬ್ರುವರಿ 19ರಿಂದ ಏಪ್ರಿಲ್ ಎರಡರವರೆಗೆ ನಡೆಯಲಿರುವ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ದೊನಿ ನಾಯಕತ್ವದ ತಂಡವು ಯಶಸ್ಸಿನ ಹಾದಿಯಲ್ಲಿ ನಡೆಯಬೇಕು ಎನ್ನುವ ಆಶಯ ಹೊಂದಿರುವ ಎಲ್ಲರೂ ಬಂದು ನಿಮ್ಮ ಶುಭ ಹಾರೈಕೆಯ ಸಂದೇಶವನ್ನು ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಇದೇ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ‘ಕ್ರಿಕೆಟ್ ಜೋನ್’ ರಂಜನೆಯ ಆಟದಲ್ಲಿಯೂ ಪಾಲ್ಗೊಂಡು ವಿಶೇಷ ಬಹುಮಾನಗಳನ್ನು ಗೆಲ್ಲುವುದೂ ಸಾಧ್ಯ.‘ಬನ್ನಿ ನಮ್ಮೊಂದಿಗೆ ಭಾರತ ಕ್ರಿಕೆಟ್ ತಂಡದ ವಿಜಯಕ್ಕೆ ಹಾರೈಸಿ’ ಎನ್ನುವ ಘೋಷಣೆಯೊಂದಿಗೆ ಬುಧವಾರ ನಗರದ ಬಸವನಗುಡಿಯ ಬುಲ್‌ಟೆಂಪಲ್ ಎದುರು ಹಸ್ತಾಕ್ಷರ ಹಾಗೂ ಶುಭ ಸಂದೇಶ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 9.00 ಗಂಟೆಗೆ ಕ್ರಿಕೆಟ್ ಪ್ರಿಯರು ಇಲ್ಲಿಗೆ ಬಂದು ತಮ್ಮ ಸಂದೇಶಗಳನ್ನು ಬೃಹತ್ ಬ್ಯಾಟ್ ಮೇಲೆ ಬರೆದು ಹಸ್ತಾಕ್ಷರ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಜಯನಗರದ ಬಿ.ಬಿ.ಎಂ.ಪಿ. ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ 1.00ರಿಂದ ಸಂಜೆ 5.00 ಗಂಟೆವರೆಗೆ ‘ಕ್ರಿಕೆಟ್ ಜೋನ್’ ರಂಜನೆಯ ಆಟವನ್ನು ಕ್ರಿಕೆಟ್ ಪ್ರೇಮಿಗಳಿಗಾಗಿ ನಡೆಸಲಾಗುತ್ತಿದೆ.ಹಸ್ತಾಕ್ಷರಗಳನ್ನು ಸಂಗ್ರಹಿಸುವ ಬೃಹತ್ ಬ್ಯಾಟ್ ಹೊತ್ತ ರಥವು ಫೆಬ್ರುವರಿ 2ರಿಂದ 12ರವರೆಗೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ. ಅಲ್ಲಿಗೆ ಬಂದು ಭಾರತ ತಂಡದ ಬೆಂಬಲಿಗರು ತಮ್ಮ ಸಂದೇಶವನ್ನು ಬರೆಯಬಹುದಾಗಿದೆ.ಸಂದೇಶ ಹೊತ್ತ ವಾಹನ ಸಾಗುವ ಮಾರ್ಗ:

ಫೆ.2 (ಬುಧವಾರ): ಬುಲ್ ಟೆಂಪಲ್, ಗಾಂಧಿ ಬಜಾರ್, ನೆಟ್ಟಕಲ್ಲಪ್ಪ ವೃತ್ತ, ಎನ್.ಆರ್.ಕಾಲೋನಿ, ಆರ್.ಟಿ.ನಗರ, ಬನಶಂಕರಿ 2ನೇ ಹಂತ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಉತ್ತರಹಳ್ಳಿ, ಕತ್ರಿಗುಪ್ಪೆ, ಹೊಸಕೇರೆಹಳ್ಳಿ ಕ್ರಾಸ್, ಬ್ಯಾಂಕ್ ಕಾಲೋನಿ, ಶ್ರೀನಿವಾಸನಗರ, ಶ್ರೀನಗರ; ಫೆ.3 (ಗುರುವಾರ): ಕೃಷ್ಣರಾವ್ ಪಾರ್ಕ್, ಯಡಿಯೂರು, ಜಯನಗರ 4 ಹಾಗೂ 9ನೇ ಬ್ಲಾಕ್, ಜೆ.ಪಿ.ನಗರ, ಪುಟ್ಟೇನಹಳ್ಳಿ, ಬ್ರಿಗೇಡ್ ಮಿಲ್ಲೇನಿಯಮ್, ಬನ್ನೇರುಘಟ್ಟ ರಸ್ತೆ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ; ಫೆ.4 (ಶುಕ್ರವಾರ): ಚಾಮರಾಜಪೇಟೆ, ಮಾವಳ್ಳಿ, ಶಾಂತಿನಗರ, ವಿಲ್ಸನ್ ಗಾರ್ಡನ್, ಆಡುಗೋಡಿ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್; ಫೆ.5 (ಶನಿವಾರ): ಮೌಂಟ್ ಕಾರ್ಮೆಲ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಕೋಲ್ಟ್ಸ್ ಬರ್ಗ್, ಕಾಕ್ಸ್‌ಟೌನ್, ಮಾರುತಿ ಸೇವಾನಗರ, ಸಿಎಂಆರ್ ಕ್ರೀಡಾಂಗಣ, ಬಸವನಗುಡಿ, ಕಲ್ಯಾಣ ನಗರ, ಕಮ್ಮನಹಳ್ಳಿ; ಫೆ.6 (ಭಾನುವಾರ): ಅಲಸೂರು, ಇಂದಿರಾನಗರ, ದೊಮ್ಮಲೂರು, ಇಂದಿರಾನಗರ ಕ್ರೀಡಾಂಗಣ, ತಿಪ್ಪಸಂದ್ರ, ಎಚ್‌ಎಎಲ್ ಮಾರುಕಟ್ಟೆ, ಸಿ.ವಿ.ರಾಮನ್ ನಗರ; ಫೆ.7 (ಸೋಮವಾರ): ಜಯಮಹಲ್, ವಸಂತಪುರ, ಶೇಷಾದ್ರಿಪುರ, ವೈಯಾಲಿಕಾವಲ್ ಬಿಇಒ ಕಚೇರಿ ಕ್ರೀಡಾಂಗಣ, ಪ್ಯಾಲೆಸ್ ಗುಟ್ಟಹಳ್ಳಿ, ಸದಾಶಿವನಗರ, ಮಲ್ಲೇಶ್ವರ, ಮೆಜೆಸ್ಟಿಕ್ ಪ್ರದೇಶ, ಶಿಕ್ಷಕರ ಸದನ, ಗಾಂಧಿ ನಗರ; ಫೆ.8 (ಮಂಗಳವಾರ): ಸುಜಾತಾ, ಬಾಶ್ಯಾಮ್ ವೃತ್ತ, ಬಸವೇಶ್ವರ ನಗರ, ಪ್ರಶಾಂತ ನಗರ, ಹೌಸಿಂಗ್ ಬೋರ್ಡ್, ದಾಸರಹಳ್ಳಿ, ಕೆಎಲ್‌ಇ ಮೈದಾನ, ಪ್ರಸನ್ನ, ನವರಂಗ್, ಮಿಲ್ಕ್ ಕಾಲೋನಿ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್; ಫೆ.9 (ಬುಧವಾರ): ಜಕ್ಕೂರು, ಅಮೃತನಗರ, ಶಂಕರನಗರ, ಕೊಡಿಗೇನಹಳ್ಳಿ, ಆರ್.ಟಿ.ನಗರ ಕ್ರೀಡಾಂಗಣ, ನಾಗಶೆಟ್ಟಿಹಳ್ಳಿ, ಸಂಜಯ್‌ನಗರ, ಗಂಗಾನಗರ, ಆರ್.ಟಿ.ನಗರ; ಫೆ.10 (ಗುರುವಾರ): ಯಶವಂತಪುರ, ಮತ್ತಿಕೇರಿ, ವಿದ್ಯಾರಣ್ಯಪುರ, ಯಲಹಂಕ, ಎಂ.ಎಸ್.ಪಾಳ್ಯ, ಶೇಷಾದ್ರಿಪುರ ಕಾಲೇಜ್, ಅತ್ತೂರು, ಯಲಹಂಕ; ಫೆ.11 (ಶುಕ್ರವಾರ): ಮಾರಥಹಳ್ಳಿ, ಬಸವನಗರ, ಮುನೇಕೊಲಾಳ, ದೊಡ್ಡನಕ್ಕುಂದಿ, ಕಗ್ಗದಾಸಪುರ, ಉದಯನಗರ ಐಟಿಪಿಎಲ್, ಮಹಾದೇವಪುರ, ಹೂಡಿ, ವೈಟ್‌ಫೀಲ್ಡ್, ಕಾಡುಗೋಡಿ; ಫೆ.12 (ಶನಿವಾರ): ಬ್ಯಾಟರಾಯನಪುರ, ಆರ್.ವಿ.ಕಾಲೇಜ್, ನ್ಯಾಷನಲ್ ಕಾಲೇಜ್, ಜ್ಞಾನಭಾರತಿ, ಮರಿಯಪ್ಪನಪಾಳ್ಯ, ಮಲ್ಲಾಥಳ್ಳಿ, ಪಾಪಿರೆಡ್ಡಿಪಾಳ್ಯ, ನಾಗರಬಾವಿ, ಚಂದ್ರಾ ಲೇಔಟ್, ವಿಜಯನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry