ಚಾಕುವಿನಿಂದ ಇರಿದು ಕೊಲೆ

ಗುರುವಾರ , ಜೂಲೈ 18, 2019
28 °C

ಚಾಕುವಿನಿಂದ ಇರಿದು ಕೊಲೆ

Published:
Updated:

ಬೆಂಗಳೂರು: ನಾಗವಾರ ಮುಖ್ಯರಸ್ತೆ ಸಮೀಪದ ಕಾಡುಗೊಂಡನಹಳ್ಳಿ ರೈಲ್ವೆ ಗೇಟ್ ಬಳಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.ಸರಾಯಿಪಾಳ್ಯ ನಿವಾಸಿ ಚಾಂದ್‌ಪಾಷಾ (25) ಕೊಲೆಯಾದ ವ್ಯಕ್ತಿ. ಅಪರಾಧ ಹಿನ್ನೆಲೆಯುಳ್ಳ ಆತನ ವಿರುದ್ಧ ಹಲ್ಲೆ ಮತ್ತಿತರ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.ಚಾಂದ್‌ಪಾಷಾ ಮತ್ತು ಆತನ ಸ್ನೇಹಿತರು ಸೈಯದ್ ಅನ್ವರ್ ಎಂಬಾತನ ಮೇಲೆ ಕೆಲ ದಿನಗಳಿಂದ ಹಲ್ಲೆ ನಡೆಸಿದ್ದರು. ಇದರಿಂದಾಗಿ ಪರಸ್ಪರರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ರಾತ್ರಿ ಚಾಂದ್‌ಪಾಷಾ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಮದ್ಯ ಕುಡಿದು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅನ್ವರ್‌ನ ಸಹಚರರು ಆತನನ್ನು ಹಿಂಬಾಲಿಸಿ ಬಂದು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾದರು. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ ಎಂದು ಪೊಲೀಸರು ಹೇಳಿದ್ದಾರೆ.ಹೆಣ್ಣೂರು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry