ಚಾಕುವಿನಿಂದ ಇರಿದು ಪರಾರಿ

7

ಚಾಕುವಿನಿಂದ ಇರಿದು ಪರಾರಿ

Published:
Updated:

ಬೆಂಗಳೂರು: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯ ಮಾಲೀಕನಿಗೆ ಚಾಕುವಿನಿಂದ ಇರಿದು ಪರಾರಿ ಯಾದ ಘಟನೆ ಕಾಡುಗೋಡಿಯ ಸಿದ್ಧಾರ್ಥ ಬಡಾವಣೆ ಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಕೇರಳ ಮೂಲದ ಕೆ.ಎಂ.ಬಿನ್ನಿ (36) ಹಲ್ಲೆಗೊಳಗಾದವರು. ಅವರು ಮನೆಯ ಸಮೀಪದಲ್ಲೇ ಬೇಕರಿ ಇಟ್ಟುಕೊಂಡಿದ್ದಾರೆ.ರಾತ್ರಿ 10 ಗಂಟೆ ಸುಮಾರಿಗೆ ಅವರ ಮನೆಯ ಬಳಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಬಾಗಿಲು ತಟ್ಟಿದರು.ಅವರನ್ನು ಪರಿಚಿತ ವ್ಯಕ್ತಿಗಳೆಂದು ಭಾವಿಸಿದ ಬಿನ್ನಿ ಅವರು ಬಾಗಿಲು ತೆರೆದಾಗ ದುಷ್ಕರ್ಮಿಗಳು ಅವರ ಮುಖ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆ ನಡೆದ ಸಂದರ್ಭದಲ್ಲಿ ಬಿನ್ನಿ ಅವರೊಬ್ಬರೇ ಮನೆಯಲ್ಲಿದ್ದರು.ಅವರ ಪತ್ನಿ ಮತ್ತು ಮಗು ಕೇರಳಕ್ಕೆ ಹೋಗಿದ್ದರು.ಬಿನ್ನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾ ಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವು: ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದು ಒಳ ನುಗ್ಗಿದ ದುಷ್ಕರ್ಮಿಗಳು ಸುಮಾರು 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಒಂದು ಲಕ್ಷ ನಗದು ಕಳವು ಮಾಡಿದ ಘಟನೆ ಜೆ.ಸಿ.ನಗರದ ಮಾರಪ್ಪ ಗಾರ್ಡನ್‌ನಲ್ಲಿ ಮಂಗಳವಾರ ನಡೆದಿದೆ.ಈ ಬಗ್ಗೆ ಡೆಲ್ಲಿ ರೆಸಿಡೆನ್ಸಿ ಹೋಟೆಲ್‌ನ ಮಾಲೀಕ ಟಿಪ್ಪು ತಲ್ಹಾ ಎಂಬುವರು ದೂರು ನೀಡಿದ್ದಾರೆ. ಮಾರಪ್ಪ ಗಾರ್ಡ ನ್‌ನ ‘ವಲ್ಲರ ಪಾಲಿಮಾರ್’ ಎಂಬ ಅಪಾರ್ಟ್ ಮೆಂಟ್‌ನ ಮೂರನೇ ಮಹಡಿಯಲ್ಲಿ ಟಿಪ್ಪು ಅವರ ಮನೆ ಇದೆ.ಅವರು ಕುಟುಂಬ ಸದಸ್ಯರ ಜತೆ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಿಡಿಕೇಡಿಗಳು ಈ ಕೃತ್ಯ ಎಸಗಿದ್ದಾರೆ.ಅವರು ಸಂಜೆ ಮನೆಗೆ ವಾಪಸ್ ಬಂದಾಗ ಕಳವು ನಡೆದಿರುವುದು ಗೊತ್ತಾಗಿದೆ. ಕಿಡಿಗೇಡಿಗಳು 625 ಗ್ರಾಂ ಚಿನ್ನಾಭರಣ ಮತ್ತು ಒಂದು ಲಕ್ಷ ರೂಪಾಯಿ ಹಣವನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಜೆ.ಸಿ.ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಬಂಧನ: ನಗರದ ಬ್ರಿಗೇಡ್ ರಸ್ತೆಯಲ್ಲಿರುವ ‘ಇಂಡಿಯಾ ಟೆರೈನ್’ ಎಂಬ ಬಟ್ಟೆ ಮಳಿಗೆಯ ಹವಾನಿಯಂತ್ರಕ (ಎ.ಸಿ) ಯಂತ್ರದಲ್ಲಿ ತಾಮ್ರದ ತಂತಿಯನ್ನು ಕಳವು ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಅಶೋಕನಗರ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.ಮಣಿಪುರ ಮೂಲದ ಮೈಕಲ್ (23) ಮತ್ತು ಸ್ಯಾಮ್‌ಸಂಗ್ (30) ಕಳವು ಮಾಡಲು ಸಿಕ್ಕಿ ಬಿದ್ದ ಆರೋಪಿಗಳು.ಅವರು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮಳಿಗೆಯ ಮೊದಲ ಮಹಡಿಯ ಎ.ಸಿ ಯಂತ್ರದಲ್ಲಿನ ತಾಮ್ರದ ತಂತಿಯನ್ನು ಕಳವು ಮಾಡುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಹಿಡಿಯಲು ಮುಂದಾದರು.ಇದರಿಂದ ಆತಂಕಗೊಂಡ ಅವರು ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಹಡಿಯಿಂದ ಕೆಳಗೆ ಬಿದ್ದು ಗಾಯಗೊಂಡರು.ನಂತರ ಸಾರ್ವಜನಿಕರು ಅವರಿಬ್ಬರನ್ನು ಹಿಡಿದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಬಳಿಕ ಠಾಣೆಗೆ ಕರೆತಂದರು ಎಂದು ಪೊಲೀಸರು ಹೇಳಿದ್ದಾರೆ.ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಅವರು ಶಿವಾಜಿನಗರದಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry