ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

7

ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

Published:
Updated:

ಬೆಂಗಳೂರು: ರಾಜಗೋಪಾಲನಗರ ಎಂಟನೇ ಅಡ್ಡರಸ್ತೆಯಲ್ಲಿ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ವೆಂಕಟೇಶ್(32) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ರಾಜಗೋಪಾಲನಗರ ನಿವಾಸಿಯಾದ ವೆಂಕಟೇಶ್, ಕೊಳಾಯಿ ರಿಪೇರಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿಯ ಜತೆ ಸಿದ್ದರಾಜು ಎಂಬಾತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯವಾಗಿ ವೆಂಕಟೇಶ್ ಮತ್ತು ಸಿದ್ದರಾಜು ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಸಿದ್ದರಾಜು ಸ್ನೇಹಿತರ ಜತೆ ಸೇರಿಕೊಂಡು ಅವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಮನೆಯ ಸಮೀಪದ ಅಂಗಡಿ ಬಳಿ ನಡೆದು ಬರುತ್ತಿದ್ದ ವೆಂಕಟೇಶ್ ಅವರ ಮೇಲೆ ಸಿದ್ದರಾಜು ಮತ್ತು ಸ್ನೇಹಿತರು ಹಲ್ಲೆ ನಡೆಸಿ, ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪಾನಮತ್ತರಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸಹಕಾರ ಸಂಘಕ್ಕೆ ಆಯ್ಕೆ

ರಾಜರಾಜೇಶ್ವರಿನಗರ: ಬೆಂಗಳೂರು ದಕ್ಷಿಣ ತಾಲ್ಲೂಕು ರಾಮೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ವಿ.ವೆಂಕಟೇಶಪ್ಪ ಅಧ್ಯಕ್ಷರಾಗಿ ಆಯ್ಕೆಯಾದರು.  ಕೃಷ್ಣಮೂರ್ತಿ, ನಾರಾಯಣಪ್ಪ, ಬೈರಪ್ಪ, ಗಂಗಾಧರ್ ನಿರ್ದೇಶಕರಾಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry